ಬಾಜಿರಾವ್ ಹಿಂದಿನ ಸತ್ಯಗಳು

Update: 2015-12-29 11:21 GMT

ನಾನಿವತ್ತು ಬಾಜಿರಾವ್ ಮಸ್ತಾನಿಯ ಬಗ್ಗೆ ಬರೆಯಬೇಕೆಂದು ಆಲೋಚಿಸಿದ್ದೇನೆ. ನಾನು ಆ ಸಿನೆಮಾವನ್ನು ನೋಡಿಲ್ಲ. ನೋಡುವ ಉದ್ದೇಶವೂ ನನಗಿಲ್ಲ. (ಗುಜರಾತಿಗಳ ಪೈಕಿ ನೋಡಬಲ್ಲ ಸಿನೆಮಾಗಳನ್ನು ಮಾಡಬಲ್ಲ ಶಕ್ತಿಯಿರುವುದು ಒಬ್ಬನಿಗೆ ಮಾತ್ರ. ಅದು ಸಂಜಯ್ ಲೀಲಾ ಬನ್ಸಾಲಿಯೂ ಅಲ್ಲ; ಸಾಜಿದ್ ನಾಡಿಯಾವಾಲನಿಗೂ ಅಲ್ಲ. ಅದು ಮನಮೋಹನ್ ದೇಸಾಯಿ ಎಂಬ ನಿಜವಾದ ಕಲಾಕಾರನಿಗೆ ಮಾತ್ರ) ನಾನು ಈ ಸಿನೆಮಾದ ಕುರಿತು ಒಂದು ವಿಮರ್ಶೆಯನ್ನು ಓದುವಾಗ ಬೆಚ್ಚಿದೆ. ಅದನ್ನು ಬರೆದಾತ ಈ ಸಿನೆಮಾ 18ನೆ ಶತಮಾನದಲ್ಲಿ ಬದುಕಿದ್ದ ಮರಾಠ ದಂಡನಾಯಕ ಬಾಜಿರಾವ್ ಬಲ್ಲಾಲ್ ಭಟ್‌ನ ಪ್ರೇಮ ಬದುಕನ್ನು ತೋರಿಸುತ್ತದೆ. ಆತ ಮುಘಲರ ವಿರುದ್ಧ 40 ಯುದ್ಧಗಳನ್ನು ಹೂಡಿ, ಗೆದ್ದು ಅಖಂಡ ಭರತವರ್ಷವೆಂಬ ಸಂಯುಕ್ತ ಹಿಂದೂ ಸಂಸ್ಥಾನವನ್ನು ಕಟ್ಟಲು ಬಯಸಿದ್ದ ಎಂದು ಅವರು ಬರೆದಿದ್ದರು.

ಹೋಯ್! ಅಲ್ಲಿಗೇ ನಿಲ್ಲಿ. ಮೊದಲ ವಿಷಯ, ಮರಾಠರು ಯಾವತ್ತೂ ಅವರಿಗಾಗಿ ಕಟ್ಟಿಕೊಳ್ಳಲು ಬಯಸಿದ್ದು ಒಂದು ಮರಾಠಿ ಸಾಮ್ರಾಜ್ಯವನ್ನು ಮಾತ್ರವೇ. ಅದು ಎಂದೂ ಸಂಯುಕ್ತವಾಗಲಿಲ್ಲ, ಅಖಂಡವೂ ಆಗುವುದಿರಲಿ, ಅದು ಹಿಂದೂ ಆಗಬೇಕೆಂದೂ ಅವರ ಆಸೆಯಾಗಿರಲಿಲ್ಲ. ಇತಿಹಾಸ ನಮಗೆ ತೋರಿಸುವಂತೆ ಮರಾಠರ ವಿರುದ್ಧ ಇತರ ಹಿಂದೂ ರಾಜರೇ ಕತ್ತಿಮಸೆಯುತ್ತಿದ್ದರು, ಮರಾಠರಲ್ಲದ ಇತರೇ ಹಿಂದೂಗಳಿಗೂ ಅವರನ್ನು ಕಂಡರೆ ಅಷ್ಟಕ್ಕಷ್ಟೇ ಇತ್ತು.

ಬಾಜಿರಾವ್ ಮತ್ತು ಮರಾಠರು ದಂಡುಕಟ್ಟಿಕೊಂಡದ್ದು ಒಂದೇ ಕಾರಣಕ್ಕೆ: ಅದು ಚೌತ್‌ಗಾಗಿ. ಹಾಗೆಂದರೆ ಇತರ ಸಾಮ್ರಾಜ್ಯಗಳ ವರಮಾನದಲ್ಲಿನ ನಾಲ್ಕನೆ ಒಂದು ಭಾಗ ತಮಗೆ ಬೇಕೆಂಬುದು ಅವರ ಬಯಕೆಯಾಗಿತ್ತು. ಆ ಸಾಮ್ರಾಜ್ಯದ ರಾಜನೂ ಪ್ರಜೆಯೂ ಯಾವುದೇ ನಂಬಿಕೆಯವರಾಗಿರಲಿ, ಇವರಿಗೆ ಬೇಕಿದ್ದದ್ದು ಅವರ ಚೌತ್ ಮಾತ್ರ. ಇದನ್ನು ಸಂಪಾದಿಸಿಕೊಂಡು ತರುವಲ್ಲಿ ಬಾಜಿರಾವ್ ಮತ್ತವನ ಥರದ ಇತರರು ಸಮರ್ಥರಾಗಿದ್ದರು ಅಷ್ಟೇ.

ಮರಾಠರ ಈ ಬಗೆಯ ಸುಲಿಗೆ ಜೈಪುರದ ಈಶ್ವರೀ ಸಿಂಘ್ 1750ರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತ್ತು. ಸರ್ ಜಾದೂನಾಥ್ ಸರ್ಕಾರ್ ಎಂಬ- ನಮ್ಮ ಇತಿಹಾಸಕಾರರ ಪೈಕಿ ಮನಮೋಹನ್ ದೇಸಾಯಿಯಂಠಿಹ- ಇತಿಹಾಸಕಾರ ತಮ್ಮ ನಾಲ್ಕು ಸಂಪುಟಗಳ ಮಹಾನ್ ರಚನೆ ಮುಘಲ್ ಸಾಮ್ರಾಜ್ಯದ ಪತನದಲ್ಲಿ ತೋರಿಸುತ್ತಾರೆ. ಜನವರಿ 10ರಂದು ಸುಮಾರು 4000 ಮರಾಠರು ಜೈಪುರಕ್ಕೆ ಬಂದರು... (ಮತ್ತು) ತಮ್ಮ ರಾಜನ ಅಸಹಾಯಕ ಪರಿಸ್ಥಿತಿ ಅವರು ಶಸಗಳನ್ನು ಎತ್ತಿಕೊಳ್ಳುವಂತೆ ಮಾಡಿತೇನೋ. ಜೈಪುರ ನಗರ ಆಗ ಬಿರುಗಾಳಿಗೆ ಸಿಲುಕಿದಂತೆ ಆಗಿತ್ತು. ರಜಪೂತರೊಳಗಿದ್ದ ದ್ವೇಶ ಆಗ ಭುಗಿಲೆದ್ದಿತು. ಮಧ್ಯಾಹ್ನದ ಹೊತ್ತಿಗೆ ದಂಗೆ ಪ್ರಾರಂಭಯಿತು. ಪ್ರಜೆಗಳೇ ಮೇಲೆ ಮುಗಿಬಿದ್ದರು. ಒಂಬತ್ತು ಗಂಟೆಗಳ ಕಾಲ ಕೊಲೆ ಮತ್ತು ಹತ್ಯೆಗಳು ನಿರಂತರ ಸಂಭವಿಸಿದವು.

ಮರಾಠರು ಮೊದಲು ದಾಳಿ ಮಾಡಿದ್ದು ಬಂಗಾಲದ ಮೇಲೆ, 1742ರಲ್ಲಿ. ನವ ಕೆಂಬ್ರಿಜ್ ಇತಿಹಾಸ ಮಾಲಿಕೆಯಲ್ಲಿನ ಭಾರತದ ಕುರಿತ ಪುಸ್ತಕ ಈ ಜನ ಹೇಗೆ ನಡೆದುಕೊಂಡರು ಎಂಬುದರ ಕುರಿತು ಹೇಳುತ್ತದೆ: ಭಾರತೀಯರು ಮತ್ತು ಯೂರೋಪಿಯನ್ನರು ಇಬ್ಬರ ಪೈಕಿಯವರೂ ಇದನ್ನು ಒಪ್ಪಿಕೊಂಡಿದ್ದಾರೆ. ಸಮಕಾಲೀನ ಇತಿಹಾಸಕಾರನೊಬ್ಬ, ಅವರನ್ನು ಗರ್ಭಿಣಿಯರು ಮತ್ತು ಶಿಶುಗಳನ್ನು ಕೊಂದ ಕೊಲೆಗಡುಕರು ಇವರು ಎಂದು ಕರೆಯುತ್ತಾನೆ. ಸರ್ಕಾರ್ ಅವರು ಹಿಂದೂ ಮಹಿಳೆಯರನ್ನು ಅತ್ಯಾಚಾರ ಮಾಡಿ ಕೊಲೆಗೈದ ಇವರ ಕೃತ್ಯಗಳನ್ನು ದಾಖಲಿಸುತ್ತಾರೆ.

ಅವರ ಬಾಯಿಗಳನ್ನು ಧೂಳುಗಳಿಂದ ತುಂಬಿ, ಕೈಗಳನ್ನು ಮುರಿದು ಹಿಂಬದಿಗೆ ಕಟ್ಟಿ ಎಳೆದುಕೊಂಡು ಹೋಗುವ ಚಿತ್ರಣಗಳನ್ನು ಅವರು ನೀಡುತ್ತಾರೆ. ತನ್ನ ಪ್ರಜೆಗಳನ್ನು ಈ ಮರಾಠರ ದಾಳಿಯಿಂದ ರಕ್ಷಿಸಲು ಪ್ರಯತ್ನಿಸಿದ ಏಕೈಕ ಭಾರತೀಯನೆಂದರೆ ಮುಗಲರ ಗವರ್ನರ್ ಆಗಿದ್ದ ಅಲಿ ವರ್ದಿ ಖಾನ್ ಮಾತ್ರ. ಅಖಂಡ ಭಾರತಕ್ಕೆ ಇದು ಸಾಕು! ಆದರೆ ನಾನು ಹೇಳಲೇಬೇಕು: ಮರಾಠರು ಇನ್ಯಾವ ಇತರೇ ಯುದ್ಧೋನ್ಮಾದೀ ಸಮುದಾಯಗಳಿಗಿಂತಲೂ ಭಿನ್ನವಾಗೇನೂ ವರ್ತಿಸಲಿಲ್ಲ. ಸಂಯುಕ್ತ ಹಿಂದೂ ಸಂಸ್ಥಾನದ ಭಾವನೆಗಳು ಇರುವುದು ಇತಿಹಾಸವನ್ನು ಸಿನೆಮಾಗಳಿಂದ ಕಲಿಯುವ ಜನರ ಕಲ್ಪನಾಲೋಕದಲ್ಲಿ ಮಾತ್ರವೇ.

ಮರಾಠರು ಏನನ್ನು ದಕ್ಷಿಣದಿಂದ ಉತ್ತರ ದಿಕ್ಕಿನಲ್ಲಿ ನಡೆಸುತ್ತ ಬಂದರೋ ಅದನ್ನೇ ಸಿಖ್ಖರು ವಿರುದ್ಧ ದಿಕ್ಕಿನಲ್ಲಿ ನಡೆಸುತ್ತ ಬಂದರು. (ಈ ಸುಲಿಗೆಯನ್ನು ಅವರು ರಕ್ಷಣೆಯ ಹೆಸರಿನಲ್ಲಿ ರಾಖಿ ಎಂದು ಕರೆದರು. ಅದು ಒಟ್ಟಾರೆ ಭಾರತೀಯರಲ್ಲಿ 10% ವನ್ನು ಒಳಗೊಂಡಿತ್ತು) ಆದರೆ ಇನ್ನೊಂದು ಒಪ್ಪಿಕೊಳ್ಳಲೇಬೇಕಾದ ಸತ್ಯವೆಂದರೆ ಈ ವಿಷಯದಲ್ಲಿ ಮರಾಠರು ಮೊದಲಿಗರಾಗಿದ್ದರು.

 ಬಾಜಿರಾವ್ ಮತ್ತು ಮಸ್ತಾನಿಯ ಈ ಪ್ರಣಯಕತೆಯಲ್ಲಿ ಮಸ್ತಾನಿಗೆ ಕುದುರೆಯನ್ನೋಡಿಸಲು ಬರುತ್ತಿತ್ತೆಂಬುದು ಏಕೆ ಮುಖ್ಯವೆಂದರೆ- ಮೊಗಲರ ಜೊತೆಯಲ್ಲಿದ್ದಂತೆ ಇವರನ್ನು ಹೊರುವ ಹೌದಾಗಳು ಮತ್ತು ಹೊರುವ ಜನರು ಮರಾಠರ ಬಳಿಯಲ್ಲಿ ಇರಲಿಲ್ಲ.

ಮರಾಠರು ಒಂದು ಬಗೆಯಲ್ಲಿ ದಕ್ಷಿಣ ಏಶಿಯಾದ ಮುಂಗೋಲ ರಾಗಿದ್ದರು. ಸದಾ ಕುದುರೆಯನ್ನೇರಿಯೇ ಸಂಚರಿಸುತ್ತ, ನಡೆಯುವ ಸೈನಿಕರಿರದ, ಬೃಹತ್ ಹಿಂಪಡೆಯನ್ನು ಕಟ್ಟಿಕೊಂಡು ಓಡಾಡದ ಜನ ಇವರು. ಅವರನ್ನು ಹಿಂಬಾಲಿಸುತ್ತಿದ್ದ ಬಾರ್ಜಿಗಳೆಂಬ ಆಯ್ದು ತಿನ್ನುವವರು ಸಹಾ ಕುದುರೆಯನ್ನೇರಿಯೇ ಸಂಚರಿಸುತ್ತಿದ್ದರು. ಮುಂಗಾರು ಮುಗಿಯುತ್ತಿದ್ದಂತೆ 40,000 ಜನರ ಮರಾಠರ ಪಡೆಯು ದಖ್ಖನದ ಗಡಿಯಾದ ನರ್ಮಾದಾ ಮತ್ತು ತಾಪಿ ನದಿಗಳನ್ನು ದಾಟಿ ಹಿಂದೂಸ್ಥಾನದ ಮೇಲೆ ದಾಳಿಮಾಡಿದರು.

ಶಿವಾಜಿ ಯಾವಾಗಲೂ ಇದನ್ನು ಒಂದು ನಿರ್ದಿಷ್ಟ ದಿನದಂದು ಆಯೋಜಿಸುತ್ತಿದ್ದ: ದಸರಾದ ದಿನ. (ಬಾಳ್ ಠಾಕರೆಯವರು ಈ ಸಂಪ್ರದಾಯವನ್ನು ದಸರೆಯ ದಿನ ಅವರು ಕೊಡುತ್ತಿದ್ದ ಬೆಂಕಿಯುಗುಳುವ ಭಾಷಣಗಳಲ್ಲಿ ಮುಂದುವರಿಸಿದರು). ಈ ರೈತಾಪಿ-ರಾಜನ ಮರಣದ ನಂತರ ಅಕಾರವು ಬ್ರಾಹ್ಮಣ ಪೇಶ್ವೆಗಳಿಗೆ ದಾಟಿಹೋಯಿತು. ಅವರಲ್ಲಿ ಅತ್ಯುತ್ತಮನಾಗಿದ್ದಾತನೇ ಈ ಬಾಜಿರಾವ್. ಮೊಗಲರ ಹಣಬಲ ಮತ್ತು ಯುದ್ಧಶಕ್ತಿಗಳು ಔರಂಗಝೇಬನ ನಂತರ ಕುಸಿದುಹೋಗುತ್ತ ಬಂದಂತೆ, ಇಲ್ಲಿಯವರೆಗೆ ಹೆಚ್ಚು ಪರಿಚಿತವಾಗಿರದಿದ್ದ ಉತ್ತರದ ಭೂಪ್ರದೇಶಗಳತ್ತ ದೌಡಾಯಿಸಿದರು. ಈ ಸಂದರ್ಭದಲ್ಲಿ ತನ್ನ ಯವ್ವನದ ದಿನಗಳಲ್ಲಿದ್ದ ಬಾಜಿರಾವ್ ಈ ದಾಳಿಗಳ ಸಂದರ್ಭದಲ್ಲಿ ಒಂದು ವಿಷಯವನ್ನಂತೂ ಸರಿಯಾಗಿಯೇ ಗುರುತಿಸಿದ. ಅದೆಂದರೆ ತಮ್ಮ ಸಾಮ್ರಾಜ್ಯವನ್ನು ಕಾಪಾಡಿಕೊಳ್ಳುವ ಶಕ್ತಿಯನ್ನು ಮೊಗಲರು ಕಳೆದುಕೊಂಡಿದ್ದಾರೆ ಎಂಬುದು.

ಈ ಕ್ಷಣದಿಂದ ಮರಾಠರು ತಮ್ಮ ಕುದುರೆಯ ಬೆನ್ನೇರಿ ತಿರುಗುವುದಕ್ಕಿಂತ ನೆಲೆನಿಂತು ಭೂಮಿಯನ್ನು ಹಿಡಿದಿಟ್ಟುಕೊಳ್ಳಲು ತೊಡಗಿದರು. ಆದ್ದರಿಂದಲೇ ಹೋಲ್ಕ್, ಸಿಂಯಾ, ಗಾಯಕ್ವಾಡ್ ಎಂಬ ಹೆಸರುಗಳು ನಮಗೆ ಭಾರತದಾದ್ಯಂತ ಕಾಣುತ್ತದೆ. ಇವರು ಯಾರೂ ಆ ಪ್ರದೇಶಗಳ ಮೂಲದವರಲ್ಲ. ಪ್ರತಿಯೊಬ್ಬರೂ ತಮಗೆ ಸಿಕ್ಕಿದ್ದನ್ನ ವಶಪಡಿಸಿಕೊಂಡು ಅದನ್ನು ಉಳಿಸಿಕೊಳ್ಳಲು ಹೆಣಗಿದರು. ಇದಕ್ಕೆ ಯಾವುದೇ ಭಾರತ, ಹಿಂದೂ ಆಯಾಮವಿಲ್ಲ.

ಬಾಜಿರಾವ್ ಒಂದು ಅತ್ಯುತ್ತಮ ಯುದ್ಧವನ್ನು ಗೆದ್ದಿದ್ದ. ಅದು ಹೈದರಾಬಾದಿನ ನಿಝಾಮನಾಗಿದ್ದ ಚಿನ್ ಕಿಲಿಚ್ ಖಾನ್‌ನ ವಿರುದ್ಧ, ಅದು ಒಂದು ಅತ್ಯುತ್ತಮ ಯುದ್ಧತಂತ್ರವಾಗಿತ್ತು. ಬಾಜಿರಾವ್‌ನ ಪಡೆಯು ಖಾನ್‌ನ ಸೈನಿಕರು ಕಾಲಿಡಲೂ ಆಗದಂತೆ ಜಾಗಗಳನ್ನು ಆಕ್ರಮಿಸಿಕೊಂಡಿದ್ದರು. ಖಾನ್ ಹೆಚ್ಚು ಸ್ಪರ್ಧೆ ಕೊಡದೇ ಸೋಲೊಪ್ಪಿಕೊಳ್ಳಬೇಕಾಯಿತು. ಅದೊಂದು ಚದುರಂಗದಾಟವಾಗಿತ್ತು. ಈ ಬಗೆಯ ಸಂದರ್ಭವು ಪಾಣಿಪತ್ ಕದನದಲ್ಲೂ ಬಂದಿತ್ತು. ಆಗ ಅಬ್ದಾಲಿಯು ಮರಾಠರನ್ನು ಇದೇ ಬಗೆಯ ನಿಪುಣತೆಯಿಂದ ಸೋಲಿಸಿದ್ದ, ಆದರೆ ಆಗ ಮರಾಠರು ಯುದ್ಧದಲ್ಲಿ ತೊಡಗುವುದನ್ನು ಧೈರ್ಯದಿಂದ ಆಯ್ಕೆಮಾಡಿಕೊಂಡು ಸತ್ತುಬಿದ್ದಿದ್ದರು. ಓದುಗರಿಗೆ ಆಶ್ಚರ್ಯವಾಗಬಹುದು, ಆಗ ಜ್ಯೋತಿರಾದಿತ್ಯನ ಪೂರ್ವಜ ಸಿಂಧ್ಯನೊಬ್ಬ ಮತ್ತು ಹೋಲ್ಕರ್ ಇಬ್ಬರೂ ರಣರಂಗದಿಂದ ಪರಾರಿಯಾಗಿದ್ದರು. ಆಗ ಅಬ್ದಾಲಿಯು ಯುದ್ಧದಲ್ಲಿ ಗೆಲ್ಲುವಂತೆ ನೋಡಿಕೊಳ್ಳಲು ಅವನಿಗೆ ಆಯುಧಗಳನ್ನು ಪೂರೈಸಿದವನೊಬ್ಬ ಹಿಂದು ಸಿಖ್ಖನಾಗಿದ್ದ- ಹೆಸರು ಅಲಾ ಸಿಂಗ್. ಆತನನ್ನು ಅಬ್ದಾಲಿಯು ಪಟಿಯಾಲದ ಮಹಾರಾಜನನ್ನಾಗಿ ಮಾಡಿ ಋಣ ತೀರಿಸಿದ. ಈತನು ಪ್ರಸಿದ್ಧ ದಂಡನಾಯಕ ಅಮರೀಂದರ್ ಸಿಂಘ್‌ನ ಪೂರ್ವಜ.

Writer - ಆಕರ್ ಪಟೇಲ್

contributor

Editor - ಆಕರ್ ಪಟೇಲ್

contributor

Similar News