ದಮಾಮ್: ಇಂಡಿಯಾ ಫ್ರಟರ್ನಿಟಿ ಫೋರಮ್ ನಿಂದ ಸೀರತುನ್ನಬಿ ಅಭಿಯಾನ

Update: 2016-01-01 11:18 GMT

ದಮಾಮ್, ಡಿ.21: ಇಂಡಿಯಾ ಫ್ರಟರ್ನಿಟಿ ಫೋರಮ್, ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ಚಾಪ್ಟರ್ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಪ್ರವಾದಿ ಸಂದೇಶ ಪ್ರಚಾರ ಕಾರ್ಯಕ್ರಮ ''ಸೀರತುನ್ನಬಿ ಅಭಿಯಾನ''ದ ಅಂಗವಾಗಿ ಜುಬೈಲ್ ಮತ್ತು ಅಲ್ ಹಸ ನಗರಗಳಲ್ಲಿ ''ನಮ್ಮ ಪ್ರವಾದಿ (ಸ.ಅ.)'' ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜುಬೈಲ್ ನ ಮರಾಫಿಕ್ ಬೀಚ್ ಕ್ಯಾಂಪ್ ನಲ್ಲಿ 2016ರ ಜನವರಿ 1 ರಂದು ರಾತ್ರಿ 7.30ಕ್ಕೆ ಸಾರ್ವಜನಿಕ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಹಾಗೂ  ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅದೇ ರೀತಿ ಅಲ್ಹಸದ ಅಲ್ ಮಲಕಿ ಇಸ್ತಿರಾದಲ್ಲಿ ಜನವರಿ 8ರಂದು ಮಧ್ಯಾಹ್ನ 1 ಗಂಟೆಗೆ ''ನಮ್ಮ ಪ್ರವಾದಿ (ಸ.ಅ.)'' ಪ್ರವಾದಿ ಸಂದೇಶ ಪ್ರಚಾರ ಕಾರ್ಯಕ್ರಮ ನಡೆಯಲಿರುವುದು.

ಅನಿವಾಸಿ ಭಾರತೀಯರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಇಂಡಿಯಾ ಫ್ರಟರ್ನಿಟಿ ಫೋರಮ್ ಪತ್ರಿಕಾ ಪ್ರಕಟಣೆಯ ಮೂಲಕ ಕೇಳಿಕೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News