ಅತ್ಯಾಚಾರ ಸಂತ್ರಸ್ತೆಯ ಹೆಸರು ಹೇಳುವ ಅಥವಾ ಹೇಳದಿರುವ ಕುರಿತು...

Update: 2016-01-01 18:39 GMT

ಹೈದರಾಬಾದಿನ ನಲ್ಸಾರ್ ಕಾನೂನು ವಿಶ್ವವಿದ್ಯಾನಿಲಯದ ಅನಿಂದಿತಾ ಮುಖರ್ಜಿ ಭಾರತದ ಮೊಟ್ಟ ಮೊದಲ ‘ತಟಸ್ಥಲಿಂಗಿ’ ಪ್ರಮಾಣಪತ್ರವನ್ನು ಪಡಿದಿರುವುದಕ್ಕಾಗಿ ಸುದ್ದಿಯಲ್ಲಿದ್ದಾರೆ ಮತ್ತು ವ್ಯಕ್ತಿನಾಮಗಳ ಹಿಂದಿರುವ ಗೌರವಸೂಚಕ ಸಂಕೇತಗಳಾದ ಮಿಸ್ಟರ್(ಋ್ಟಿ.) ಅಥವಾ ಮಿಸೆಸ್(. ) ಬದಲಾಗಿ ಎಂಎಕ್ಸ್ (ಋ್ಡಿ. ) ಸಂಕೇತವನ್ನು ಪಡೆದಿದ್ದಾರೆ. ಕಳೆದ ವಾರ ಇವರು ನಮ್ಮ ಪತ್ರಿಕೆಗೆ ಪತ್ರವೊಂದನ್ನು ಬರೆದು, ದೆಹಲಿಯ ನಿರ್ಭಯ ಪ್ರಕರಣ ಎಂದು ಗುರುತಿಸಲ್ಪಡುವ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಯ ಹೆಸರನ್ನು (ನಿರ್ಭಯ ತಾಯಿಯೇ ಹೇಳಿದ್ದರೂ ಸಹ) ನಾವು ಪ್ರಕಟಿಸದೇ ಇರುವುದನ್ನು ಪ್ರಶ್ನೆಮಾಡಿದ್ದಾರೆ. ಕೆಲವು ಆವೃತ್ತಿಗಳಲ್ಲಿ ‘‘ನನ್ನ ಮಗಳ ಹೆಸರನ್ನು ಹೇಳಿ, ನಿರ್ಭಯಾಳ ತಾಯಿ’’ ಎಂದು ತಲೆಬರಹವಿದ್ದು, ಒಳಗಿನ ವರದಿಯಲ್ಲಿ ಆಕೆಯ ಹೆಸರು ಬರುವ ಕಡೆ ಖಾಲಿ ಜಾಗ ಬಿಟ್ಟಿರುವುದರ ಬಗ್ಗೆ ಆಶ್ಚರ್ಯವ್ಯಕ್ತಪಡಿಸಿದ್ದಾರೆ!
ದಿಲ್ಲಿಯ ಜಂತರ್‌ಮಂತರ್‌ನ ನಿವಾಸಿಗಳು ಆಯೋಜಿಸಿದ್ದ ‘ನಿರ್ಭಯ್ ದಿವಸ್’ ಆಚರಣೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದ ನಿರ್ಭಯಾಳ ತಾಯಿ ‘‘ನನ್ನ ಮಗಳ ಹೆಸರು........, ನಾನು ಅವಳ ಹೆಸರನ್ನು ಹೇಳಲು ನಾಚಿಕೆಪಡುವುದಿಲ್ಲ. ನೀವು ಅವಳ ಹೆಸರನ್ನೂ ಹೇಳಬೇಕು’’ ಎಂದು ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಋ್ಡಿ. ಮುಖರ್ಜಿಯವರು ಸಂಪಾದಕೀಯ ಪುಟದಲ್ಲಿ ಈ ವಿಷಯದ ಬಗ್ಗೆ ವಿಸ್ತಾರವಾಗಿ ಬರೆದಿರುವುದನ್ನು ವ್ಯಂಗ್ಯ ಮಾಡಿದ್ದಾರೆ. ‘‘ನಾನು ಅವರ ಕೆಲವು ಗ್ರಹಿಕೆಗಳನ್ನು ಮಾತ್ರ ನಿಮ್ಮಾಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನಾನು ಅವರ ಮಾತುಗಳ ತಾತ್ಪರ್ಯವನ್ನು ಹೇಳುವ ಬದಲು ಒಂದು ಗಂಭೀರವಾದ ಸಂಪಾದಕೀಯ ತೀರ್ಮಾನವನ್ನು ತಗೆದುಕೊಂಡಿದ್ದೆ. ನಾನು ಆಕೆಯ ಹೆಸರನ್ನು ಮುಚ್ಚಿಡುವ ಪ್ರಯತ್ನಮಾಡಿರಲಿಲ್ಲ. ಬದಲಿಗೆ ಸಂತ್ರಸ್ತೆಯ ಹೆಸರು ಬರುವ ಕಡೆ ‘ಆಕೆ’, ‘ಅವಳು’ ಎಂದು ಬಳಸಿ, ಪತ್ರಿಕೋದ್ಯಮದಲ್ಲಿರಬೇಕಾದ ನಿಜವಾದ ಪರಾನುಭೂತಿಯನ್ನು ಗೌರವಿಸಿ, ಲಿಂಗಾಧಾರಿಯ ಹಿಂಸೆಯ ವಿರುದ್ಧವಾಗಿರುವ ಒಂದು ಚೈತನ್ಯವನ್ನು ಎತ್ತಿಹಿಡಿದಿದ್ದೆವು.
ಮುಖರ್ಜಿಯವರ ಪ್ರಕಾರ ‘ನಿರ್ಭಯ’ ಪದದ ಬಳಕೆಯೇ ಪಲಾಯನವಾದಿ ಕ್ರಮ. ಮನುಷ್ಯ ಎದುರಿಸುವ ಹಲ್ಲೆಯ ಸಾಧ್ಯತೆಗಳಲ್ಲಿ ‘ಭಯವಿಲ್ಲದ್ದು’ ಎಂಬುದಿಲ್ಲ. ಯಾರೂ ಠೀವಿಯಿಂದ ಅದನ್ನು ಎದುರಿಸಲು ಹೋಗುವುದಿಲ್ಲ. ಹಲ್ಲೆಯ ಭಯ ಸ್ವಾಭಾವಿಕವಾದದ್ದು. ಹಾಗಾಗಿ ನಾವು ಅವಳ ಮತ್ತು ಅವಳಂತಹ ಸಾವಿರಾರು ಜನರು ಎದುರಿಸಿದ ಅನುಭವಗಳಿಗೆ ಅಪಚಾರ ಮಾಡುತ್ತಿದ್ದೇವೆ. ಒಂದು ಘಟನೆಗೆ ನಾವು ಒಂದು ಧೀರೋದ್ಧಾತ ಹೆಸರನ್ನು ಇಟ್ಟ ಮಾತ್ರಕ್ಕೆ ಅದು ಹಾಗಾಗಿಬಿಡುವುದಿಲ್ಲ. ಹಾಗೆ ನೋಡಿದರೆ ಅವಳದ್ದೊಂದು ದುರಂತಾತ್ಮಕ ಅಂತ್ಯ. ಪ್ರಾಯಶಃ ಹಾಗಾಗಿಯೇ, ಹಿಂದೂ ಪತ್ರಿಕೆ (ಚಿಂತನೆಯ ಪತ್ರಿಕೆ ಎಂದು ಕರೆದುಕೊಳ್ಳುವ) ಈ ಎಲ್ಲರ ದಾರಿಯಲ್ಲೇ ನಡೆದು ಆ ಧೀರೋದ್ಧಾತ ಪದವನ್ನು ಬಳಸದೆ, ಸರಳವಾಗಿ ಆಕೆಯನ್ನು ಕೇವಲ ‘ಒಬ್ಬಾಕೆ’ ಎನ್ನುವ ಅರ್ಥದಲ್ಲಿ ಸಂಬೋಧಿಸಿದೆ.

ಅತ್ಯಾಚಾರ ಮತ್ತು ಕಳಂಕ
 ಆ ಅತ್ಯಾಚಾರ ಸಂತ್ರಸ್ತೆಯ ತಾಯಿಯಾದ ಆಶಾದೇವಿ ಅವಳ ಮಗಳನ್ನು ಅವಳ ಹೆಸರಿನಿಂದಲೇ ಗುರುತಿಸಬೇಕೆಂದು ಕೋರಿದ್ದಾರೆ, ಅತ್ಯಾಚಾರಕ್ಕೊಳಗಾದವರು ನಾಚಿಕೆಪಟ್ಟುಕೊಂಡು ಬದುಕುವ ಅಗತ್ಯವಿಲ್ಲ ಎಂಬ ಖಚಿತವಾದ ನಂಬಿಕೆಯಿಂದ ಹೇಳಿದ್ದಾರೆ. ಈಗ ಮುಖರ್ಜಿಯವರು ಕೇಳುವುದೇನೆಂದರೆ: ‘‘ಒಂದು ಪಕ್ಷ ಆಕೆಯ ಕೋರಿಕೆಯನ್ನು ಪೂರ್ಣಗೊಳಿಸುವುದು ಮೌಲ್ಯಯುತ ವಾದದ್ದಲ್ಲ ಎಂದಾಗಿದ್ದರೆ ಏಕೆ ಈ ಪತ್ರಿಕೆ ಆ ವಿಷಯದ ಬಗ್ಗೆ ಬರೆಯಿತು? ಹೀಗೆ ಬರೆದೂ, ಅದು ಆಕೆಯ ಮನವಿಯನ್ನು ಅಂಗೀಕರಿಸಲಿಲ್ಲ ಎಂದಾದರೆ, ಅದು ಆಕೆಗೆ ತೋರುವ ಅಗೌರವವಲ್ಲವೇ?
ಋ್ಡಿ. ಮುಖರ್ಜಿಯವರು ವಕೀಲರಾಗಿರು ವುದರಿಂದ ಕೆಲವು ಕಾನೂನಿನ ಆಗುಹೋಗುಗಳನ್ನು ಪ್ರಸ್ತಾಪಿಸುವ ಮೂಲಕ ಪತ್ರಿಕೆಗೆ ‘ಸಂದೇಹದ ಲಾಭ’ವನ್ನು ನೀಡಿದ್ದಾರೆ. ಅತ್ಯಾಚಾರ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಲು ನಿರ್ಬಂಧಿಸಿ, ಅದು ಅಪರಾಧವೆಂದು ಹೇಳುವ ಐಪಿಸಿ 228 ಸೆಕ್ಷನ್ ಅನ್ನು ವಿವರಿಸುತ್ತಾರೆ. ನಂತರ ಇದಕ್ಕೆ ವಿನಾಯತಿ ಪಡೆಯಲು ಸಂತ್ರಸ್ತರಿಂದ ಅಥವಾ ಅವರು ಮರಣಹೊಂದಿದ್ದ ಪಕ್ಷದಲ್ಲಿ ಅಥವಾ ಅಪ್ರಾಪ್ತ ವಯಸ್ಕಳೋ ಅಥವಾ ಬುದ್ಧಿಮಾಂದ್ಯಳೋ ಆಗಿದ್ದ ಪಕ್ಷದಲ್ಲಿ ಅವರ ಸಮೀಪದ ಸಂಬಂಧಿಗಳಿಂದ ಲಿಖಿತ ಅನುಮತಿ ಇದ್ದಲ್ಲಿ ಹೆಸರನ್ನು ಬಹಿರಂಗಪಡಿಸಲು ಅನುಮತಿ ನೀಡುವ 228(ಎ)2(ಸಿ) ಸೆಕ್ಷನ್‌ನ ಪ್ರಸ್ತಾಪಮಾಡುತ್ತಾರೆ.
ಈಗ ಇವರ ವಾದವೇನೆಂದರೆ, ಕೆಲವು ಮಹಿಳಾ ಗುಂಪುಗಳು ಸಂಘಟಿಸಿದ್ದ ಸಾರ್ವಜನಿಕ ವೇದಿಕೆಯಲ್ಲಿ ಸಂತ್ರಸ್ತೆಯ ತಾಯಿಯಾದ ಶ್ರೀಮತಿ ದೇವಿಯವರೇ ಈ ವಿಷಯವನ್ನು ನೇರವಾಗಿ ಹೇಳಿರುವುದರಿಂದ, ಇದು ಕಾನೂನು ನೀಡುವ ವಿನಾಯತಿ ಚೌಕಟ್ಟಿನಲ್ಲಿ ಬರುತ್ತದೆ ಮತ್ತು ಇದನ್ನು ಆ ಅರ್ಥದಲ್ಲಿಯೇ ಸ್ವೀಕರಿಸಬಹುದಾಗಿತ್ತು. ಆದರೆ ಆಕೆಯ ವಿವರಣೆಯ ಪ್ರಕಾರ, ಇಂಥದ್ದೊಂದು ಅವಕಾಶವಿದ್ದಾಗ್ಯೂ ಈ ಪತ್ರಿಕೆ ಏಕೆ ಸಂತ್ರಸ್ತೆಯ ಹೆಸರನ್ನು ಹೇಳಲಿಲ್ಲ ಎಂದರೆ, ಅಲ್ಲಿಗಾಗಲೇ ಸಂತ್ರಸ್ತೆಯ ಹೆಸರು ಸಾರ್ವಜನಿಕವಾಗಿ ಚಾಲ್ತಿಯಲ್ಲಿದ್ದಾಗ್ಯೂ ಸಂತ್ರಸ್ತೆಯ ತಂದೆ 2013ರಲ್ಲಿ ‘ಸಂಡೇ ಪೀಪಲ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತುಗಳು ದೇವಿಯವರ ಘೋಷಣೆಯೊಂದಿಗೆ ತಾಳೆಯಾಗುವುದಿಲ್ಲ ಎಂದು.
 ಇಲ್ಲಿನ ಸಮಸ್ಯೆ ಎಂದರೆ ಋ್ಡಿ. ಮುಖರ್ಜಿಯವರ ಮಾತುಗಳು ಭಾವನಾತ್ಮಕವಾಗಿ ಸರಿಯಾಗಿವೆಯಾದರೂ ಅದರಲ್ಲಿ ವಿಮರ್ಶಾತ್ಮಕ ದೃಷ್ಟಿಕೋನವಿಲ್ಲ. ಸಂದರ್ಭ ಮತ್ತು ಜನರ ಬಗ್ಗೆ ಬರೆಯುವಾಗ ಭಾಷೆಯ ಬಗ್ಗೆ ಇರಬೇಕಾದ ಗೌರವದ ಬಗ್ಗೆ ಆಕೆ ಹೇಳುವ ಮಾತುಗಳನ್ನು ನಾನು ಒಪ್ಪುತ್ತೇನೆ. ಆದರೆ ಇಲ್ಲಿ ತಾತ್ವಿಕತೆಯ ಪ್ರಶ್ನೆ ಇದೆ. ಒಂದು ಅತ್ಯಾಚಾರ ಪ್ರಕರಣದ ವರದಿಯಿಂದ ಹಿಡಿದು ಅದರ ಸಾಮಾನ್ಯ ಮುಂದುವರಿಕೆಗಳಾದ ಪೊಲೀಸರ ಪ್ರಥಮ ವರದಿ, ನ್ಯಾಯಾಲಯದ ಹಿಯರಿಂಗುಗಳು, ಸಾರ್ವಜನಿಕ ಪ್ರತಿಭಟನೆಗಳು, ಹೋರಾಟಗಾರರ ಮಧ್ಯ ಪ್ರವೇಶ ಇವೆಲ್ಲವೂ ಕಾನೂನಾತ್ಮಕ ಅಗತ್ಯಗಳಿಗಿಂತ ಆಚಿನವು. ಆದರೆ ಇಲ್ಲೊಂದು ಸ್ಪಷ್ಟತೆಯ ಅಗತ್ಯವಿದೆ. ಒಂದು ಸುಪ್ರಸಿದ್ಧವಾದ ಪ್ರಕರಣ, ಮೂಲೆಗುಂಪಾದ ಇನ್ನೊಂದು ಅಂಥದ್ದೇ ಪ್ರಕರಣಕ್ಕಿಂತ ಭಿನ್ನವಾಗ ಬಾರದು. ಇದು ಇಲ್ಲಿರಬೇಕಾದ ತಾತ್ವಿಕ ಚೌಕಟ್ಟು.
ಏಕೆ ಎಲ್ಲ ವರದಿಗಳಲ್ಲಿ ಈ ‘ನಿರ್ಭಯ’ ಎಂಬ ಪದದ ಬಳಕೆಯಾಯಿತು? ಉತ್ತರ ಸರಳ: ಇದು ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪಿದ ಪದವಾಗಿತ್ತು ಮತ್ತು ಇದನ್ನು ಬಳಸುವ ಮೂಲಕ ತುಂಬಾ ಕಡಿಮೆ ಅವಧಿಯಲ್ಲಿ ಇಡೀ ವೃತ್ತಾಂತವನ್ನು ಓದುಗನಿಗೆ ತಲುಪಿಸಬಹುದಾಗಿತ್ತು. ಈ ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೊಂದು ಉತ್ತಮ ಉಪಕರಣವಾಗಿತ್ತು. ಅಲ್ಲದೆ ಸಂತ್ರಸ್ತೆಯ ಹೆಸರನ್ನು ಬಹಿರಂಗ ಪಡಿಸುವ ವಿಷಯದಲ್ಲಿ ಅವರ ಕುಟುಂಬದ ನಿಲುವು ಅಸ್ಥಿರವಾಗಿತ್ತು.
ಇದೇ ಪತ್ರಿಕೆ 2015 ಮಾರ್ಚ್ 6ರಂದು ಪ್ರಕಟಿಸಿದ್ದ ಪಿಟಿಐ ವರದಿಯಲ್ಲಿ ‘‘ಸಂತ್ರಸ್ತೆಯ ತಂದೆ ‘ಇಂಡಿಯಾಸ್ ಡಾಟರ್’ ಎಂಬ ಸಾಕ್ಷ್ಯಚಿತ್ರದಲ್ಲಿ ಸಂತ್ರಸ್ತೆಯ ಹೆಸರನ್ನು ಬಹಿರಂಗ ಪಡಿಸುವುದನ್ನು ವಿರೋಧಿಸಿದ್ದರು’’ ಹಾಗೊಂದು ಪಕ್ಷ ಬಿಬಿಸಿಯ ಈ ಡಾಕ್ಯುಮೆಂಟರಿಯಲ್ಲಿ ಸಂತ್ರಸ್ತೆಯ ಹೆಸರನ್ನು ಪ್ರಸ್ತಾಪಿಸಿದಲ್ಲಿ ಕಾನೂನಿನ ಕ್ರಮ ಜರಗಿಸುವುದಾಗಿಯೂ ಎಚ್ಚರಿಸಿದ್ದರು.
ಫಾಸ್ಟ್‌ಟ್ರಾಕ್ ಕೋರ್ಟ್‌ನಲ್ಲಿ ವಿಚಾರಣೆ ನಡೆಸಿದ್ದೂ ಸೇರಿದಂತೆ, ಈ ನಿರ್ಭಯ ಪ್ರಕರಣ ಒಂದು ಅಪರೂಪದ ವಿನಾಯಿತಿ ಪ್ರಕರಣ. ಇದು ಕೇಂದ್ರ ಸರಕಾರದ ಮೇಲೆ ಮಹಿಳೆಯರ ಸುರಕ್ಷತೆ ಬಗ್ಗೆ ಕಾಳಜಿವಹಿಸಲು ಒತ್ತಡ ಹೇರಿ, ಜಸ್ಟೀಸ್ ವರ್ಮಾ ಕಮಿಟಿಯನ್ನು ನೇಮಿಸಲು ಪ್ರೇರಕವಾದ ಪ್ರಕರಣ, ಈ ಕಮಿಟಿಯ ಶಿಫಾರಸುಗಳನ್ನು ಎಲ್ಲ ಮಹಿಳಾ ಮತ್ತು ಕಾನೂನು ಸಂಘಟನೆಗಳು ಮುಕ್ತವಾಗಿ ಸ್ವಾಗತಿಸಿದವು, ನಿಜ. ಆದರೂ ರಾಷ್ಟ್ರೀಯ ರಾಜಧಾನಿಯಲ್ಲಿ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯವಂತೂ ಕಡಿಮೆಯಾಗಿಲ್ಲ! ನಿಜ ಹೇಳಬೇಕೆಂದರೆ ಅವು ಉಲ್ಭಣಗೊಂಡಿವೆ!! ನ್ಯಾಷನಲ್ ಕೆಮ್ ಬ್ಯೂರೋ ಅಂಕಿ-ಅಂಶಗಳ ಪ್ರಕಾರ 2013ರಲ್ಲಿ 1,441 ಇದ್ದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ 2014ರಲ್ಲಿ 1,813ಕ್ಕೇರಿವೆ. ನಾವು ನಮ್ಮ ಮಹಿಳೆಯರಿಗೆ ನಗರಗಳಲ್ಲಿರಲಿ, ಗ್ರಾಮಾಂತರದಲ್ಲೂ ರಕ್ಷಣೆ ಕೊಡಲಾಗುತ್ತಿಲ್ಲ!! ಹಾಗಾಗಿ, ನನಗನ್ನಿಸುವುದೇನೆಂದರೆ... ಬರೀ ಈ ಕಾನೂನಿನ ಮೇಲೆ ಅವಲಂಬಿತರಾಗುವುದಕ್ಕಿಂತ ಸ್ವಂತ ಎಚ್ಚರಗೊಳ್ಳುವುದು ಹೆಚ್ಚು ಪರಿಣಾಮಕಾರಿ ಎಂದು.

Writer - ಎ. ಎಸ್. ಪನ್ನೀರ್‌ಸೆಲ್ವಂ

contributor

Editor - ಎ. ಎಸ್. ಪನ್ನೀರ್‌ಸೆಲ್ವಂ

contributor

Similar News