ಎಂ.ಸಿ.ಮುಹಮ್ಮದ್ (ಚೆಯ್ಯೆಕ)
Update: 2016-01-04 00:39 IST
ಚೆಯ್ಯಕ ಮಂಗಳೂರು, ಜ.3: ಫಳ್ನೀರ್‌ನ ಎಸ್.ಎಲ್.ಮಥಾಯಿಸ್ ರಸ್ತೆಯ ಬ್ರೂಕ್‌ಲೇನ್ ನಿವಾಸಿ ಎಂ.ಸಿ.ಮುಹಮ್ಮದ್ (ಚೆಯ್ಯೆಕ) ರವಿವಾರ ಸಂಜೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಏಳು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಅವರ ಅಂತ್ಯ ಸಂಸ್ಕಾರವು ಸೋಮವಾರ ಬಂದರ್‌ನ ಕೇಂದ್ರ ಜುಮಾ ಮಸೀದಿಯಲ್ಲಿ ಳುಹರ್ ನಮಾಝ್ ಬಳಿಕ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.