ಬರಹ
Update: 2016-01-07 13:46 IST
ಮಧ್ಯ ರಾತ್ರಿಯ ಚಳಿ. ಕಾದಂಬರಿಕಾರ ಅದೇನೋ ಬರೆಯುತ್ತಿದ್ದ.
ಅವನ ಪತ್ನಿ ನಿದ್ದೆಯಿಲ್ಲದೆ ಅಂಗಳದಲ್ಲಿ ಬೆಂಕಿ ಹಾಕಿ ಚಳಿ ಕಾಯಿಸುತ್ತಿದ್ದಳು.
ಲೇಖಕ ಓಡೋಡಿ ಬಂದ ''ಏನೇ ನನ್ನ ಕಾದಂಬರಿಗಳನ್ನೆಲ್ಲ ಬೆಂಕಿಗೆ ಹಾಕಿ ಉರಿಸುತ್ತಿದ್ದೀಯಲ್ಲ...''
''ಕೊರೆವ ಚಳಿಯಲ್ಲಿ ಲೇಖಕನ ಬರಹ ನಮ್ಮನ್ನು ಬೆಚ್ಚಗಿಡಬೇಕು'' ನುರಿತ ವಿಮರ್ಶಕಿಯಂತೆ ಅವಳು ನುಡಿದಳು.