×
Ad

ಅಡುಗೆ ಅನಿಲ ಅನಧಿಕೃತ ರೀಫಿಲ್ಲಿಂಗ್ ದಂಧೆ

Update: 2016-01-07 23:22 IST

ಆರೋಪಿಯ ಬಂಧನಬೆಂಗಳೂರು, ಜ. 7: ಗೃಹ ಬಳಕೆ ಅಡುಗೆ ಅನಿಲವನ್ನು ಅನಧಿಕೃತವಾಗಿ ರೀಫಿಲ್ಲಿಂಗ್ ಮಾಡುತ್ತಿದ್ದ ಆರೋಪದ ಮೇಲೆ ಇಲ್ಲಿನ ರಾಜರಾಜೇಶ್ವರಿ ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ಒಟ್ಟು 1.32 ಲಕ್ಷ ರೂ.ಮೊತ್ತದ ವಿವಿಧ ಕಂಪೆನಿಗಳ 91 ಅಡುಗೆ ಅನಿಲದ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ನಗರದ ಮೈಸೂರು ರಸ್ತೆಯ ವಾಲ್ಮೀಕಿ ನಗರದ ನಿವಾಸಿ ಹನುಮಂತಪ್ಪ (25) ಎಂದು ಗುರುತಿಸಲಾಗಿದೆ.ಲ್ಲಿನ ದ್ವಾರಕ ನಗರದಲ್ಲಿನ ಪೂಜಪ್ಪ ಲೇಔಟ್‌ನಲ್ಲಿ ಆರೋಪಿ ತನ್ನ ಸಹಚರರೊಂದಿಗೆ ಸೇರಿ ಅಡುಗೆ ಅನಿಲ ರೀಫಿಲ್ಲಿಂಗ್ ದಂಧೆ ನಡೆಸುತ್ತಿದ್ದ ಎಂದು ಹೇಳಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿ ಧನಂಜಯ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಮೊಕದ್ದಮೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವ ರಾಜರಾಜೇಶ್ವರಿ ನಗರ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News