×
Ad

ಫೆಲೆಸ್ತೀನ್‌ನಲ್ಲೂ ಸಲ್ಮಾನ್‌ಗೆ ಫ್ಯಾನ್‌ಗಳಿದ್ದಾರೆ !

Update: 2016-01-11 19:45 IST

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಜನಪ್ರಿಯತೆ ದೂರದ ಫೆಲೆಸ್ತೀನ್ ನಾಡಿಗೂ ಹರಡಿರುವುದು ಕಳೆದ ವಾರ ಬೆಳಕಿಗೆ ಬಂದಿದೆ. ಫೆಲೆಸ್ತೀನ್‌ನ ‘ಫ್ರೀಡಂ ಥಿಯೇಟರ್’, ರಂಗಸಂಸ್ಥೆಯು ದಿಲ್ಲಿ ಮೂಲದ ರಂಗಭೂಮಿ ತಂಡ ಜನನಾಟ್ಯ ಮಂಚ್‌ನ ಸಹಯೋಗದೊಂದಿಗೆ ಭಾರತದಲ್ಲ್ಲಿ ಹಮೇಶಾ ಸಮೀದಾ ನಾಟಕವನ್ನು ಪ್ರದರ್ಶಿಸಿತ್ತು.

ಹತ್ತು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದ ಫ್ರೀಡಂ ಥಿಯೇಟರ್‌ನ ಫೆಲೆಸ್ತೀನಿ ಕಲಾವಿದರು, ತಾವು ಸಲ್ಮಾನ್ ಖಾನ್‌ರ ಅಭಿಮಾನಿಗಳೆಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ವಿಷಯ ತಿಳಿದ ಹಮೇಶಾ ಸಮೀದಾ ನಾಟಕದ ನಿರ್ದೇಶಕ ಸುಧನ್ವ ದೇಶಪಾಂಡೆ, ತನ್ನ ಬಾಲ್ಯದ ಗೆಳೆಯ ಕಬೀರ್ ಖಾನ್ ಮೂಲಕ, ಅವರಿಗೆ ಸಲ್ಮಾನ್ ಜೊತೆ ಭೇಟಿಯ ಏರ್ಪಾಡು ಮಾಡಿದ್ದರು.

  ಮುಂಬೈನ ಪಂಚತಾರಾ ಹೊಟೇಲೊಂದರಲ್ಲಿ ಕಬೀರ್ ಖಾನ್ ಅವರ ನೆರವಿನಿಂದ ಫೆಲೆಸ್ತೀನಿ ರಂಗನಟರು, ಸಲ್ಮಾನ್‌ನನ್ನು ಭೇಟಿಯಾದರು. ಆಗ ಹೊಟೇಲ್ ಪರಿಸರದಲ್ಲಿ ್ಲ ಸಲ್ಮಾನ್ ಅಭಿನಯದ ಸುಲ್ತಾನ್ ಚಿತ್ರದ ಶೂಟಿಂಗ್ ನಡೆಯುತ್ತಿತ್ತು.ಫೆಲೆಸ್ತೀನಿ ರಂಗನಟರೊಂದಿಗೆ ಮಾತುಕತೆ ನಡೆಸಿದ ಸಲ್ಮಾನ್, ಫೆಲೆಸ್ತೀನ್ ರಂಗಭೂಮಿಯ ಬಗ್ಗೆ ಆಸಕ್ತಿಯನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಸಲ್ಮಾನ್‌ಗೆ, ಈ ನಟರು ಫೆಲೆಸ್ತೀನ್‌ನ ಸಾಂಪ್ರದಾಯಿಕ ‘ಕೆಫಿಯಾ’ ಸ್ಕಾರ್ಫ್ ಹೊದೆಸಿ, ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News