ವಾಹನಗಳಿಗೆ ಬೆಂಕಿ: ಆರೋಪಿಗಳ ಬಂಧನ
ರಾತ್ರಿಯ ವೇಳೆ ಮನೆಗಳ ಮುಂದೆ ನಿಲ್ಲಿಸುತ್ತಿದ್ದ ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ನಂದಿನಿ ಲೇಔಟ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕನಕಪುರ ರಸ್ತೆಯ ಮುಹಮ್ಮದ್ ಇಮ್ರಾನ್(26), ಪೀಣ್ಯದ ಇಮ್ರಾನ್ ಪಾಷ(27), ಟ್ಯಾನರಿ ರಸ್ತೆಯ ಮುಹಮ್ಮದ್ ಸಗೀರ್(27), ವಿದ್ಯಾರಣ್ಯಪುರದ ಅರ್ಪತ್ ಖಾನ್(21), ನವೀನ್(19), ನಂದಿನಿ ಲೇಔಟ್‌ನ ಜಾಫರ್ ಸಾದಿಕ್(23), ಬಾಬಾ ಫಕ್ರುಲ್ಲಾ(19) ಹಾಗೂ ನೂಮನ್ (19) ಬಂಧಿತ ಆರೋಪಿಗಳು.ರೋಪಿಗಳು ಕಳೆದ ಕೆಲವು ವರ್ಷಗಳಿಂದ ರಾತ್ರಿವೇಳೆ ಮನೆಯ ಮುಂದೆ ನಿಲ್ಲಿಸುತ್ತಿದ್ದ ವಾಹನಗಳಿಗೆ ಬೆಂಕಿ ಹಚ್ಚುವ ಕಾರ್ಯದಲ್ಲಿ ತೊಡಗಿದ್ದರು. ಜ.4ರಂದು ನಂದಿನಿ ಲೇಔಟ್‌ನ ಸೈಯದ್ ಪಾಷರವರ ಮನೆಯ ಮುಂದೆ ನಿಲ್ಲಿಸಿದ್ದ 4 ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಪ್ರಕರಣದ ಸಂಬಂಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದರು. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ನಂದಿನಿಲೇಔಟ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸದಾನಂದ ತಿಳಿಸಿದ್ದಾರೆ.