×
Ad

3 ತಿಂಗಳಿಂದ ವೇತನ ಬಾಕಿ

Update: 2016-01-12 23:47 IST

ಗುತ್ತಿಗೆ ಪೌರ ಕಾರ್ಮಿಕರ ಪ್ರತಿಭಟನೆ ಬೆಂಗಳೂರು, ಜ.12: ನಗರಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕರಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡದ ಕ್ರಮವನ್ನು ಖಂಡಿಸಿ ರಾಜರಾಜೇಶ್ವರಿನಗರ ವಲಯದ ಪಾಲಿಕೆ ಕಚೇರಿ ಮುಂಭಾಗದಲ್ಲಿ ಪೌರ ಕಾರ್ಮಿಕರು ಇಂದು ಪ್ರತಿಭಟನೆ ನಡೆಸಿದರು.

ರಾಜರಾಜೇಶ್ವರಿನಗರ ವಲಯದ ಬಿಬಿಎಂಪಿ ಕಚೇರಿಯ ಮುಂದೆ ಇಂದು ಬೆಳಗ್ಗೆ 6 ಗಂಟೆಗೆ ಜಮಾಯಿಸಿದ ಪೌರ ಕರ್ಮಿಕರು, ಕಳೆದ ಮೂರು ತಿಂಗಳಿನಿಂದ ವೇತನ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ, ಕೆಲಸಗಳಿಗೆ ತೆರಳದೆ ಬಾಕಿ ವೇತನ ಪಾವತಿಸುವಂತೆ ಪ್ರತಿಭಟನೆ ವ್ಯಕ್ತಪಡಿಸಿದರು. ಧಿಕಾರಿಗಳು ಹೇಳಿದ ಸ್ಥಳಗಳಲ್ಲಿ, ಪ್ರದೇಶಗಳಲ್ಲಿ ಹೋಗಿ ಕಾರ್ಯನಿರ್ವಹಿಸಿದರೂ, ಪೌರ ಕಾರ್ಮಿಕರಿಗೆ ಬೇಕಾದ ಅಗತ್ಯ ಸಲಕರಣೆಗಳನ್ನು ನೀಡದೆ, ಸಮಸ್ಯೆಗಳಿಗೆ ಸ್ಪಂದಿಸದೆ ಉಡಾಫೆಯಿಂದ ವರ್ತಿಸುತ್ತಿದ್ದಾರೆ ಎಂದು ಪೌರ ಕಾರ್ಮಿಕರ ನಾಯಕ ಮುತ್ಯಾಲ ಅವರು ದೂರಿದರೆ, ವೇತನವಿಲ್ಲದೆ ಮಕ್ಕಳು ಮರಿಗಳು ಹಸಿವಿನಿಂದ ಮಲಗುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡರು.

ತಿಂಗಳಿಗೆ 5 ಸಾವಿರ ರೂ ವೇತನ ನಿಗದಿಪಡಿಸಿದ ಅಧಿಕಾರಿಗಳು, ನಮ್ಮಿಂದ ಕೆಲಸ ತೆಗೆದುಕೊಂಡರೇ ಹೊರತು, ಕಳೆದ ಮೂರು ತಿಂಗಳಿಂದ ಯಾವುದೇ ವೇತನ ನೀಡಲಿಲ್ಲ. ಕೇಳಿದರೆ ನಾಳೆ ಬನ್ನಿ ನೋಡೋಣ ಎಂದು ಹೇಳಿ ಕಳುಹಿಸುತ್ತಾರೆ. ಇಲ್ಲ ಸ್ವಾಮಿ, ಕಷ್ಟ ಅಂದರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅವಾಚ್ಯವಾಗಿ ನಿಂದಿಸಿ ಹೊರ ಹಾಕುತ್ತಾರೆ ಎಂದು ಪ್ರತಿಭಟನಾಕಾರರು ಕಣ್ಣೀರು ಸುರಿಸುತ್ತ ವ್ಯಥೆಯನ್ನು ತೋಡಿಕೊಂಡರು. ಪೌರ ಕಾರ್ಮಿಕರನ್ನು ಕೀಳಾಗಿ ನಡೆಸಿಕೊಳ್ಳುವ ಅಧಿಕಾರಿಗಳ ವಿರುದ್ಧ ಹಲವು ಬಾರಿ ದೂರು ನೀಡಲಾಗಿದೆ, ಆದರೂ ಜಂಟಿ ಆಯುಕ್ತ ವೀರಭದ್ರಪ್ಪಅವರು ಯಾವುದೇ ಕ್ರಮ ಜರಗಿಸಿಲ್ಲ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News