ಬೆಂಗಳೂರು ವಸಂತೋತ್ಸವ
Update: 2016-01-14 23:41 IST
ಬೆಂಗಳೂರು, ಜ. 14: ಭಾರತೀಯ ಸಮಾಗಮ ಸಭಾ, ಅನನ್ಯ ಜಿಎಂಎಲ್ ಮತ್ತು ಬಿಟಿಎಮ್ ಕಲ್ಚರಲ್ ಅಕಾಡಮಿ ಸೇರಿ ಸುಮಾರು ಇಪ್ಪತ್ತು ಸಾಹಿತ್ಯಕ ಸಂಸ್ಥೆಗಳಿಂದ ಇಂದಿನಿಂದ ಫೆ. 29ವರೆಗೆ ‘ಬೆಂಗಳೂರು ವಸಂತೋತ್ಸವ’ ಎಂಬ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ಕೆ.ಎನ್.ಅನಂತರಾಮಯ್ಯ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ನಗರದಲ್ಲಿ 20 ಸಭಾಂಗಣಗಳಲ್ಲಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ 500 ಹಾಡುಗಾರರು, ನೃತ್ಯಗಾರರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇದಕ್ಕಾಗಿ 120 ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಭಾಗವಹಿಸಬಹುದಾಗಿದ್ದು, ಕಲಾವಿದರಿಗೂ ಮುಕ್ತ ಅವಕಾಶ ನೀಡಬೇಕೆಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.