×
Ad

‘ಬೆಳ್ಳಿ ಸಿನೆಮಾ: ಬೆಳ್ಳಿಮಾತು’; ‘ತಮಸ್ಸು’ ಚಿತ್ರ ಪ್ರದರ್ಶನ, ಸಂವಾದ

Update: 2016-01-14 23:43 IST

ಬೆಂಗಳೂರು, ಜ.14: ರಾಜ್ಯ ಚಲನಚಿತ್ರ ಅಕಾಡಮಿಯು ಬೆಂಗಳೂರಿನಲ್ಲಿ ಪ್ರತಿ ಶನಿವಾರದಂದು ನಡೆಸುವ ‘ಬೆಳ್ಳಿ ಸಿನೆಮಾ ಬೆಳ್ಳಿ ಮಾತು’ ಕಾರ್ಯಕ್ರಮದಲ್ಲಿ ಜ.16 ರಂದು ಸಂಜೆ 4 ಗಂಟೆಗೆ ಮಿಲ್ಲರ್ಸ್‌ ರಸ್ತೆಯಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಡಾ.ಶಿವರಾಜ್‌ಕುಮಾರ್ ನಟಿಸಿರುವ ‘ತಮಸ್ಸು’ ಸಿನೆಮಾ ಪ್ರದರ್ಶನ ಏರ್ಪಡಿಸಲಾಗಿದೆ.

 ಚಿತ್ರ ಕುರಿತಂತೆ ತಮಸ್ಸು ಚಿತ್ರದ ನಿರ್ಮಾಪಕ ಎಂ.ಎಸ್.ರವೀಂದ್ರ ಅವರೊಂದಿಗೆ ಬೆಳ್ಳಿ ಮಾತು ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಲನಚಿತ್ರ ಛಾಯಾಗ್ರಾಹಕ ಬಿ.ಎನ್.ಭಾಸ್ಕರ್ ಹಾಗೂ ಚಲನಚಿತ್ರ ನಿರ್ದೇಶಕಿ ಡಿ.ಸುಮನಾ ಕಿತ್ತೂರು ಉಪಸ್ಥಿತರಿರುವರು. ಅಕಾಡಮಿಯ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News