ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ ಸ್ಪರ್ಶ
Update: 2016-01-15 23:47 IST
ಬೆಂಗಳೂರು, ಜ. 15: ಇಲ್ಲಿನ ಗವೀಪುರನಲ್ಲಿರುವ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸಂಕ್ರಾಂತಿ ಹಬ್ಬದ ದಿನ ಗವಿಗಂಗಾಧರೇಶ್ವರ ಶಿವಲಿಂಗದ ಮೇಲೆ ಸೂರ್ಯನರಶ್ಮಿ ಸ್ಪರ್ಶವಾಗುವುದನ್ನು ಭಕ್ತರು ಕಣ್ತುಂಬಿಕೊಂಡರು.
ಶುಕ್ರವಾರ ಸಂಜೆ 5:31ರ ಸುಮಾರಿಗೆ ಗಂಗಾಧರೇಶ್ವರ ಲಿಂಗದ ಮೇಲೆ ಸೂರ್ಯನ ಕಿರಣ ಸಂಪೂರ್ಣವಾಗಿ ಬೀಳುತ್ತಿದ್ದಂತೆ ಸ್ಥಳದಲ್ಲಿ ನೆರೆದಿದ್ದ ಭಕ್ತರು ಸಂತಸಪಟ್ಟರು.
ಈ ದೃಶ್ಯವನ್ನು ನೋಡಲು ನಗರದ ವಿವಿಧೆಡೆಗಳಿಂದ ಭಕ್ತರ ದಂಡೇ ಅಲ್ಲಿ ಬೀಡುಬಿಟ್ಟಿತ್ತು. ದೇವಾಲಯದಲ್ಲಿ ಎಲ್ಲ ಭಕ್ತರಿಗೆ ಈ ದೃಶ್ಯ ವೀಕ್ಷಿಸಲು ಸಾಧ್ಯವಾಗದಿದ್ದರೂ, ದೇವಸ್ಥಾನದ ಆವರಣದಲ್ಲಿ ಅಳವಡಿಸಲಾಗಿದ್ದ ದೊಡ್ಡ ಪರದೆಯಲ್ಲಿ ಹಾಗೂ ಆರು ಟಿವಿಗಳಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.