ಜ.19ರಂದು ವೇಮನ ಜಯಂತ್ಯುತ್ಸವ
Update: 2016-01-17 00:01 IST
ಬೆಂಗಳೂರು, ಜ. 16: ಕರ್ನಾಟಕ ರೆಡ್ಡಿ ಜನ ಸಂಘದ ವತಿಯಿಂದ ಜ. 19ರಂದು 604ನೆ ವೇಮನ ಜಯಂತ್ಯುತ್ಸವವನ್ನು ಕೋರಮಂಗಲದ ವೇಮನ ವಿದ್ಯಾಸಂಸ್ಥೆಗಳ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಚ್.ಎನ್.ವಿಜಯರಾಘವ ರೆಡ್ಡಿ ತಿಳಿಸಿದ್ದಾರೆ.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಶ್ರೀ ವೇಮನಾನಂದ ಸ್ವಾಮೀಜಿ ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್, ಉಪಸಭಾಪತಿ ಎನ್.ಎಚ್.ಶಿವಶಂಕರರೆಡ್ಡಿ, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಶಾಸಕರಾದ ಎಸ್.ಆರ್.ವಿಶ್ವನಾಥ್, ಎಂ.ಕೃಷ್ಣಾರೆಡ್ಡಿ, ಎಂ.ಎನ್.ಸುಬ್ಬಾರೆಡ್ಡಿ, ಮೇಯರ್ ಮಂಜುನಾಥ ರೆಡ್ಡಿ, ಚಿತ್ರನಟಿ ರೋಜಾ, ಥ್ರಿಲ್ಲರ್ ಮಂಜು, ಬಿಬಿಎಂಪಿ ಸದಸ್ಯ ಪದ್ಮನಾಭರೆಡ್ಡಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.