×
Ad

ಜ.24ರಂದು ಪಂಚವಾದ್ಯ ನಾದ ವೈಭವ

Update: 2016-01-17 00:02 IST

ಬೆಂಗಳೂರು, ಜ. 16: ಇನ್‌ಸ್ಟಿಟ್ಯೂಟ್ ಆಫ್ ಯತ್ನೋ ಮ್ಯೂಸಿಕ್ ವತಿಯಿಂದ ಜ.24ರಂದು ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಪಂಚ ವಾದ್ಯ ನಾದ ವೈಭವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ಡಾ.ಪುತ್ತೂರಾಯ ತಿಳಿಸಿದ್ದಾರೆ.

 ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚವಾದ್ಯ ನಾದ ವೈಭವದಲ್ಲಿ ಖ್ಯಾತ ವಿದ್ವಾಂಸರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ವಿಶ್ವಸಂಸ್ಥೆಯ ತಾಂತ್ರಿಕ ಸಲಹೆಗಾರ ಎಚ್.ಆರ್.ಸತೀಶ್‌ಚಂದ್ರ, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎಂ.ಸುರೇಶ್, ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಮೈಸೂರು ಸುಬ್ರಹ್ಮಣ್ಯ, ಭರತನಾಟ್ಯ ಕಲಾವಿದೆ ಡಾ.ಲಲಿತಾ ಶ್ರೀನಿವಾಸ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News