ನಾಳೆ ನೂತನ ಕೋರ್ಸ್‌ಗಳ ಉದ್ಘಾಟನೆ
ಬೆಂಗಳೂರು, ಜ. 16: ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯ ಹಾಗೂ ಅಮೆರಿಕಾದ ನಾರ್ತ್ ಡಕೋಟ ಸ್ಟೇಟ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ ಕೃಷಿ ಉದ್ದಿಮೆ ನಿರ್ವಹಣೆ ಹಾಗೂ ಅನ್ವಯಿಕ ಅರ್ಥಶಾಸ ಕುರಿತು ಕೋರ್ಸ್ ಜ.18ರಂದು ಉದ್ಘಾಟನೆಗೊಳ್ಳಲಿದೆ ಎಂದು ವಿದ್ಯಾಲಯದ ಪ್ರಾಂಶುಪಾಲ ನಾಗರಾಜ್ ತಿಳಿಸಿದ್ದಾರೆ.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಸಂಯೋಜಿತ ಕೋರ್ಸ್‌ಗಳಿಗೆ ಎರಡು ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಕೋರ್ಸ್‌ಗಳ ಜೊತೆಗೆ ಸಿಸ್ಟಮ್ ಇನೋವೇಷನ್ ಮತ್ತು ಗ್ಲೋಬಲ್ ಸ್ಟಡೀಸ್ ಕೇಂದ್ರಗಳಿಗೆ ನಾರ್ತ್ ಡಕೋಟ ವಿವಿಯ ಅಧ್ಯಕ್ಷ ಡಾ.ಬ್ರೆಸಿಯಾನಿ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಈ ಎರಡು ಕೋರ್ಸ್‌ಗಳ ಅವಧಿ ಎರಡು ವರ್ಷವಾಗಿದ್ದು, ವಿದ್ಯಾರ್ಥಿಗಳು ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯದಲ್ಲಿ ಮೊದಲ ವರ್ಷ ಉತ್ತೀರ್ಣರಾದರೆ, 2ನೆ ವರ್ಷದ ವಿದ್ಯಾಭ್ಯಾಸ ಅಮೆರಿಕಾದ ನಾರ್ತ್ ಡಕೋಟ ವಿವಿಗೆ ತೆರಳಲು ಅವಕಾಶ ನೀಡಲಾಗುತ್ತದೆ. ಡಕೋಟ ವಿವಿಯಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿಗಳು ಪ್ರಯಾಣ ದರ ಮಾತ್ರ ಭರಿಸಬೇಕಾಗಿದ್ದು, ಶಿಕ್ಷಣಕ್ಕೆ ತಗಲುವ ವೆಚ್ಚವನ್ನು ವಿಶ್ವವಿದ್ಯಾಲಯವೇ ಭರಿಸಲಿದೆ ಎಂದರು.
ಗೋಷ್ಠಿಯಲ್ಲಿ ನಿರ್ದೇಶಕ ಡಾ.ಮಂಜುನಾಥ್, ಉಪನ್ಯಾಸಕ ಸುಧೀರ್ ರೆಡ್ಡಿ ಉಪಸ್ಥಿತರಿದ್ದರು.