ವೇಶ್ಯಾವಾಟಿಕೆ: ಬಂಧನ
Update: 2016-01-17 00:05 IST
ಬೆಂಗಳೂರು.ಜ.16: ಅಪಾರ್ಟ್‌ಮೆಂಟ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಪೀಣ್ಯ ಠಾಣೆಯ ಪೊಲೀಸರು ಮೂವರು ಮಹಿಳೆಯರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಮಲ್ಲಸಂದ್ರದ ವಿಶ್ವಮೂರ್ತಿ ಹಾಗೂ ಹೇಸರಘಟ್ಟದ ನರೇಂದ್ರಬಾಬು ಬಂಧಿತ ಆರೋಪಿಗಳು. ಇವರು ಪೀಣ್ಯ ಠಾಣೆ ವ್ಯಾಪ್ತಿಯ ಟಿ.ದಾಸರಹಳ್ಳಿಯಲ್ಲಿ ಅಪಾರ್ಟ್‌ಮೆಂಟ್‌ನ್ನು ಬಾಡಿಗೆಗೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಐಯ್ಯಣ್ಣ ತಿಳಿಸಿದ್ದಾರೆ.