×
Ad

ಜೂಜಾಟ: ನಾಲ್ವರ ಬಂಧನ

Update: 2016-01-17 00:07 IST

ಬೆಂಗಳೂರು, ಜ.16: ಜೂಜು ಅಡ್ಡೆಯ ಮೇಲೆ ದಾಳಿ ಮಾಡಿ ನಾಲ್ವರನ್ನು ಬಂಧಿಸಿ 25 ಸಾವಿರ ರೂ. ಅನ್ನು ವಶಪಡಿಸಿಕೊಳ್ಳುವಲ್ಲಿ ಪೀಣ್ಯ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಟಿ.ದಾಸರಹಳ್ಳಿಯ ಅಶ್ವತ್ಥಪ್ಪ(35), ರವಿ(42), ನಾಗರಾಜ್(36) ಹಾಗೂ ಮುನಿಯಪ್ಪ(40) ಬಂಧಿತ ಆರೋಪಿಗಳು.

   ಇವರು ಬಹು ದಿನಗಳಿಂದ ಟಿ.ದಾಸರಹಳ್ಳಿಯ ರಿಲಯನ್ಸ್ ಹೌಸ್ ಸಮೀಪದಲ್ಲಿರುವ ನಿರ್ಜನ ಪ್ರದೇಶದಲ್ಲಿ ಜೂಜಾಟದಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ಮಾಡಿ ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಪೀಣ್ಯ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ಬಿ.ಐಯ್ಯಣ್ಣ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News