ಜ.23ರಂದು ಮಕ್ಕಳ ಪುಸ್ತಕಗಳ ಲೋಕಾರ್ಪಣೆ
Update: 2016-01-18 23:36 IST
ಬೆಂಗಳೂರು, ಜ. 18: ಲೇಖಕ ಯೋಗೇಶ್ ಮಾಸ್ಟರ್ ರಚಿಸಿರುವ ಎಂಟು ಮಕ್ಕಳ ಪುಸ್ತಕಗಳನ್ನು ಜ.23ರಂದು ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಮಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ ಕುಮಾರ್ ಜಹಗೀರ್‌ದಾರ್ ತಿಳಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗೇಶ್ ಮಾಸ್ಟರ್ ರಚಿಸಿರುವ ಖಾಲಿ ಸ್ಲೇಟು, ಆಡಿ ಬಾ ನನ್ನ ಕಂದ, ಮಕ್ಕಳಿರಲವ್ವಾ, ಹರೆಯದ ಕರವು, ಖಲೀಲನ ಕಣಜದಿಂದ, ಏಕವ್ಯಕ್ತಿ ಪ್ರದರ್ಶನಗಳು, ಪುರಾಣ ರೂಪಕಗಳು ಮತ್ತು ಇವನಾರವ ಈ ಎಂಟು ಕೃತಿಗಳು ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾಗಿವೆ ಎಂದು ತಿಳಿಸಿದರು. ಲೇಖಕಿ ಡಾ.ಲೀಲಾ ಸಂಪಿಗೆ, ಲೇಖಕರಾದ ಡಾ.ಸಿ.ಎಸ್. ಹನುಮಂತಪ್ಪ, ಯೋಗೇಶ್ ಮಾಸ್ಟರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.