×
Ad

ಶುಶ್ರೂಷಕರ ನೇಮಕಾತಿ- ಸ್ಪರ್ಧಾತ್ಮಕ ಪರೀಕ್ಷೆ; ಪರೀಕ್ಷಾ ಕೇಂದ್ರಗಳ ಪ್ರವೇಶ ಪತ್ರ ಲಭ್ಯತೆ

Update: 2016-01-18 23:37 IST

ಬೆಂಗಳೂರು, ಜ.18: ವಿವಿಧ ಸರಕಾರಿ/ಸ್ವಾಯತ್ತ ಸಂಸ್ಥೆಗಳಲ್ಲಿ ಖಾಲಿ ಇರುವ ಶುಶ್ರೂಷಕರ ಹುದ್ದೆಗಳಿಗೆ ಬಿ.ಎಸ್ಸಿ ಪದ ಹಾಗೂ ಸಾಮಾನ್ಯ ಶುಶ್ರೂಷಕ ತರಬೇತಿ (ಜಿ.ಎನ್.ಎಂ)ಪಡೆದವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆಯನ್ನು ಜ.31ರಂದು ನಡೆಸುತ್ತಿದ್ದು, ಪರೀಕ್ಷಾ ಕೇಂದ್ರಗಳ ಪ್ರವೇಶ ಪತ್ರಗಳನ್ನು ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್: http://kea.kar.nic.inನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಎಸೆಸೆಲ್ಸಿ/10ನೆ ತರಗತಿ/ತತ್ಸಮಾನ ಪರೀಕ್ಷೆಯಲ್ಲಿ ಕನ್ನಡವನ್ನು ಮೊದಲನೆ ಅಥವಾ ಎರಡನೆ ಭಾಷೆಯಾಗಿ ವ್ಯಾಸಂಗ ಮಾಡದಿರುವ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ಸರಕಾರದ ನಿಯಮದಂತೆ ಜ.30 ರಂದು ನಡೆಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News