ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ
Update: 2016-01-18 23:40 IST
ಬೆಂಗಳೂರು, ಜ. 18: ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯು ಸಂಗೀತ ನೃತ್ಯದಲ್ಲಿ ಪ್ರಕಟವಾಗಿರುವ ಕನ್ನಡ ಉತ್ತಮ ಪುಸ್ತಕಕ್ಕೆ ಬಹುಮಾನ ನೀಡಲು ಅರ್ಜಿ ಆಹ್ವಾನಿಸಿದೆ.
ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ನೃತ್ಯ ಕಥಾ ಕೀರ್ತನ, ಗಮಕ ಈ ಕಲಾಪ್ರಕಾರಗಳಲ್ಲಿ 2011-12, 2012-13, 2013-14 ಹಾಗೂ 2014-15ನೆ ಸಾಲಿಗೆ ಆಯಾ ವರ್ಷದ ಕ್ಯಾಲೆಂಡರ್ ವರ್ಷದಲ್ಲಿ ಜನವರಿ ಯಿಂದ ಡಿಸೆಂಬರ್ ಒಳಗೆ ಪ್ರಕಟಿಸಿರುವ ಪುಸ್ತಕಗಳನ್ನು ಬಹುಮಾನಕ್ಕೆ ಸಲ್ಲಿಸಬಹುದು. ಪ್ರಥಮ ಮುದ್ರಣಾವೃತ್ತಿಯಾಗಿರಬೇಕು. ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ, ಕನ್ನಡ ಭವನ, 2ನೆ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು -2 ಇವರಿಗೆ ಜ.30ರ ಒಳಗಾಗಿ ಅರ್ಜಿಯೊಂದಿಗೆ ಪುಸ್ತಕದ 4 ಪ್ರತಿಗಳನ್ನು ಕಳುಹಿಸುವುದು. ಹೆಚ್ಚಿನ ವಿವರ ಹಾಗೂ ಅರ್ಜಿಗಳಿಗೆ ದೂರವಾಣಿ ಸಂಖ್ಯೆ-080-2221 5072 ಮೂಲಕ ಸಂಪರ್ಕಿಸಿಯೂ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆ ಕೋರಿದೆ.