ಜ. 22ರಿಂದ ಎಸ್‌ಎಫ್‌ಐ ಅಖಿಲ ಭಾರತ ಸಮ್ಮೇಳನ
Update: 2016-01-18 23:44 IST
ಬೆಂಗಳೂರು, ಜ. 18: ಶಿಕ್ಷಣದ ವ್ಯಾಪಾರೀಕರಣ, ಕೋಮುವಾದೀಕರಣ ಮತ್ತು ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಜ.22 ರಿಂದ 4 ದಿನಗಳ ಕಾಲ ರಾಜಸ್ಥಾನದ ಸಿಕಾರದಲ್ಲಿ 15ನೆ ಅಖಿಲ ಭಾರತ ಸಮ್ಮೇಳನ ಆಯೋಜಿಸಲಾಗಿದೆ ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ವಿ.ಅಂಬರೀಶ್ ತಿಳಿಸಿದ್ದಾರೆ.
ಸಮ್ಮೇಳನವು ಪ್ರತಿ 3 ವರ್ಷಗಳಿಗೊಮ್ಮೆ ನಡೆಯುತ್ತದೆ. ಇದರಲ್ಲಿ ಸಂಘಟನೆಯ ವಿಮರ್ಶೆ, ಸ್ವಯಂ ವಿಮರ್ಶೆ ಹಾಗೂ ಸರಕಾರಗಳ ಶಿಕ್ಷಣ ವಿರೋಧಿ ನೀತಿಗಳಿಗೆ ಪರಿಹಾರ ಕಂಡುಕೊಳ್ಳುವಂತಹ ಚರ್ಚೆಗಳಿದ್ದು, ಸೀತಾರಾಂ ಯೆಚೂರಿ ಉದ್ಘಾಟಿಸಲಿದ್ದಾರೆ ಹಾಗೂ ಖ್ಯಾತ ಪತ್ರಕರ್ತರು, ಚಿಂತಕರು, ಸಾಹಿತಿಗಳು, ಪ್ರಗತಿಪರ ಹೋರಾಟಗಾರರು ಭಾಗವಹಿಸಿ ದೇಶದ ಶೈಕ್ಷಣಿಕ ಪರಿಸ್ಥಿತಿ, ಪರಿಹಾರ ಕಂಡುಕೊಳ್ಳುವಂತಹ ದಾರಿಗಳ ಬಗ್ಗೆ ಮತ್ತು ವಿದ್ಯಾರ್ಥಿಗಳನ್ನು ಕ್ರಿಯಾಶೀಲಗೊಳಿಸಲು ಮಾರ್ಗದರ್ಶನ ನೀಡಲಿದ್ದಾರೆಂದು ತಿಳಿಸಿದ್ದಾರೆ.