ಖಾಸಗಿ ವಲಯದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಗೆ ಒತ್ತಾಯ

Update: 2016-01-21 17:40 GMT

ಹಾಸನ: ಬಿವಿಎಸ್ ಬೃಹತ್ ಧರಣಿ

ಹಾಸನ, ಜ.21: ಹಿಂದುಳಿದ ವರ್ಗಗಳಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಬಹುಜನ ವಿದ್ಯಾರ್ಥಿ ಸಂಘದವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

 ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ವಿದ್ಯಾರ್ಥಿಗಳು ಎನ್.ಆರ್. ವೃತ್ತದ ಮೂಲಕ ಘೋಷಣೆಯೊಂದಿಗೆ ಜಿಲ್ಲಾಧಿಕಾರಿ ಕಚೆೇರಿ ಆವರಣಕ್ಕೆ ತೆರಳಿ ಧರಣಿ ಕುಳಿತರು.ರಿಂದ ಪ್ರಾರಂಭಗೊಂಡ ಖಾಸಗೀಕರಣವು ಒಬಿಸಿ, ಎಸ್ಸಿ, ಎಸ್ಟಿಗಳ ಸಂವಿಧಾನಾತ್ಮಕ ಮೀಸಲಾತಿಯ ಹಕ್ಕನ್ನು ವ್ಯವಸ್ಥಿತವಾಗಿ ನಾಶ ಮಾಡುತ್ತಿವೆ. ಸರಕಾರಿ ವಲಯದಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಆದರೆ ಮೀಸಲಾತಿ ಇಲ್ಲದ ಖಾಸಗಿ ವಲಯದಲ್ಲಿ ಉದ್ಯೋಗಗಳು ಸಾಕಷ್ಟು ಪ್ರಮಾಣದಲ್ಲಿ ಕಾಣುತ್ತಿದ್ದೇವೆ. ಸರಕಾರದಿಂದ ಭೂಮಿ, ವಿದ್ಯುತ್, ನೀರು, ಶುಲ್ಕ ರಿಯಾಯಿತಿ, ಭದ್ರತೆ ಸೇರಿದಂತೆ ಸಕಲ ಸವಲತ್ತುಗಳನ್ನು ಪಡೆಯುತ್ತಿರುವ ಖಾಸಗಿ ಕಂಪೆನಿಗಳು ಸಂವಿಧಾನಾತ್ಮಕವಾದ ಮೀಸಲಾತಿ ಒಪ್ಪಿಕೊಳ್ಳುತ್ತಿಲ್ಲ. ಈ ಮೂಲಕ ಜಾತಿ ಆಧಾರದ ಮೇಲೆ ಮಣೆ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು. ಬಿಸಿ, ಎಸ್ಸಿ, ಎಸ್ಟಿ ಸಮುದಾಯಗಳ ಪ್ರತಿಭಾವಂತರು ಉದ್ಯೋಗಗಳಿಂದ ವಂಚಿತರಾಗಿದ್ದಾರೆ. ಇವರಿಗೆ ಖಾಸಗಿ ವಲಯದಲ್ಲೂ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು.
  
 ರಾಜ್ಯ ಸರಕಾರವು ಲೋಕೋಪಯೋಗಿ, ನೀರಾವರಿ, ಅಬಕಾರಿ, ಅರಣ್ಯ, ಹೊಟೇಲ್ ಮ್ಯಾನೇಜ್‌ಮೆಂಟ್, ಪ್ರವಾಸೋದ್ಯಮ ಮೊದಲಾದ ಕ್ಷೇತ್ರಗಳಲ್ಲಿ ನೀಡುವ ಗುತ್ತಿಗೆಗಳಲ್ಲಿ ಒಬಿಸಿ, ಎಸ್ಸಿ, ಎಸ್ಟಿ ಸಮುದಾಯಗಳಿಗೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಕಾಪಾಡಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.ಳೆದ ನಾಲ್ಕು ವರ್ಷಗಳಿಂದ ನಮ್ಮ ಬೇಡಿಕೆಗಳ ಹಿನ್ನೆಲೆಯಲ್ಲಿ ಸ್ಪಂದಿಸಿರುವ ರಾಜ್ಯ ಸರಕಾರ, ಪ್ರಸ್ತುತ ಸರಕಾರಿ ಹಾಸ್ಟೆಲ್‌ಗಳಲ್ಲಿ ಆಂಗ್ಲ ಭಾಷೆ ಹಾಗೂ ಕಂಪ್ಯೂಟರ್ ಶಿಕ್ಷಣ ನೀಡುವ ತೀರ್ಮಾನ ಕೈಗೊಂಡಿರುವುದನ್ನು ಸ್ವಾಗತಿಸಿದ ವಿದ್ಯಾರ್ಥಿಗಳು, ಎಲ್ಲ ಹಾಸ್ಟೆಲ್‌ಗಳಿಗೂ ಸ್ವಂತ ಕಟ್ಟಡ ಹಾಗೂ ಮೂಲಭೂತ ಸೌಕರ್ಯ ಒದಗಿಸಿಕೊಡಲು ಒತ್ತಾಯಿಸಿದರು.ೈಲಿನಲ್ಲಿರುವ ಕೈದಿಗಳಿಗೆ ದಿನದ ಊಟಕ್ಕೆ 75 ರೂ. ನೀಡುತ್ತಿರುವ ಸರಕಾರ ವಿದ್ಯಾರ್ಥಿಗಳ ದಿನದ ಊಟಕ್ಕೆ 35 ರೂ. ನೀಡುತ್ತಿರುವುದು ವಿಪರ್ಯಾಸಕರ. ಕೂಡಲೇ ವಿದ್ಯಾರ್ಥಿಗಳ ಮಾಸಿಕ ಭತ್ತೆಯನ್ನು 3 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು.ಳೆದೆರಡು ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಯಾಕ್‌ಲಾಗ್ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಭರವಸೆಯನ್ನು ನೀಡುತ್ತಿದ್ದಾರೆ ಹೊರತು ಕಾರ್ಯರೂಪಕ್ಕೆ ತಂದಿರುವುದಿಲ್ಲ ಎಂದು ದೂರಿದರು. ಸರಕಾರಗಳು ಕೂಡಲೇ ಅಹಿಂದ ವರ್ಗಗಳ ವಿದ್ಯಾರ್ಥಿ-ಯುವ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಧರಣಿ ನಿರತರು ಇಲ್ಲವಾದಲ್ಲಿ ಫೆ.3 ರಿಂದ 5ರವರೆಗೂ ಬೆಂಗಳೂರಿನಲ್ಲಿ ಆಯೋಜಿಸಿರುವ ವಿಶ್ವ ಹೂಡಿಕೆದಾರರ ಸಮಾವೇಶಕ್ಕೆ ಬಿವಿಎಸ್ ವಿದ್ಯಾರ್ಥಿ ಸಂಘದಿಂದ ಒಂದು ಲಕ್ಷ ವಿದ್ಯಾರ್ಥಿಗಳ ನೇತೃತ್ವದಲ್ಲಿ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.ಸಂದರ್ಭದಲ್ಲಿ ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಯೋಜಕ ಎಮ್.ಎಸ್. ಯೋಗೇಶ್, ಜಿಲ್ಲಾಧ್ಯಕ್ಷ ಮಧು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್, ಬಿಎಸ್ಪಿ ಜಿಲ್ಲಾಧ್ಯಕ್ಷ ರಾಜೇಶ್, ಕಾಯಾಧ್ಯಕ್ಷ ಎ.ಪಿ. ಅಹ್ಮದ್, ದಸಂಸ ಮುಖಂಡ ಬಿ.ಪಿ. ಜಯರಾಂ, ಕೃಷ್ಣದಾಸ್, ಜಿಲ್ಲಾ ವಾಲ್ಮೀಕಿ ಸಂಘದ ನಾಯಕ ಜಿ.ಒ. ಮಹಾಂತಪ್ಪ, ಟಿಪ್ಪು ಸಂಘರ್ಷ ಸೇನೆಯ ಮಬಶ್ಶಿರ್ ಅಹ್ಮದ್, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಆರ್.ಪಿ.ಐ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News