×
Ad

ಬಿ. ಮುನವ್ವರ್ ಅಲಿ

Update: 2016-01-22 08:41 IST

ಮೂಡುಬಿದಿರೆ: ಹಿರಿಯ ಧಾರ್ಮಿಕ, ಸಾಮಾಜಿಕ ಮುಂದಾಳು, ಮೂಡುಬಿದಿರೆಯ ಅಲಂಗಾರು ನಿವಾಸಿ ಬಿ. ಮುನವ್ವರ್ ಅಲಿ ಅವರು ಅಲ್ಪ ಕಾಲದ ಅಸೌಖ್ಯದ ಬಳಿಕ ಗುರುವಾರ ತಡರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 78 ವರ್ಷ ವಯಸ್ಸಾಗಿತ್ತು. 

ಜಮೀಯತೆ ಅಹ್ಲೆ ಹದೀಸ್ ಸಂಘಟನೆಯ ಪ್ರಮುಖ ನಾಯಕರಾಗಿದ್ದ ಮುನವ್ವರ್ ಅಲಿ ಅವರು ಪವಿತ್ರ ಸಂದೇಶ ನಿಯತಕಾಲಿಕದ ಸ್ಥಾಪಕ ಸಂಪಾದಕರಾಗಿದ್ದರು. ಅವರು ಅಲಂಗಾರು ಮುಹಮ್ಮದಿ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ಐವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ. 
ಅವರ ಪತ್ನಿ ಹಾಗೂ ಓರ್ವ ಪುತ್ರ ಕೆಲವು ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. 

ಇಂದು ಮಧ್ಯಾಹ್ನ ಜುಮಾ ನಮಾಝ್ ಬಳಿಕ ಅಲಂಗಾರು ಮಸೀದಿ ವಠಾರದಲ್ಲಿ ಅವರ ಅಂತ್ಯಸಂಸ್ಕಾರ ನಡೆಯಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News