ವಿಶೇಷ ಪುಷ್ಪ ಪ್ರದರ್ಶನ: ಬಿಡಿಎಗೆ ಪ್ರಥಮ ಸ್ಥಾನ

Update: 2016-01-23 18:19 GMT

ಬೆಂಗಳೂರು, ಜ. 23: ನಗರದ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ವಿಶೇಷ ಪುಷ್ಪ ಪ್ರದರ್ಶನದಲ್ಲಿ ಸರಕಾರಿ ಸಂಸ್ಥೆಗಳ ವರ್ಗದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೆಚ್ಚು ಸಂಖ್ಯೆಯಲ್ಲಿ ಪ್ರಶಸ್ತಿಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದೆ. ಸರಕಾರಿ ಸಂಸ್ಥೆಗಳ ವರ್ಗದಲ್ಲಿ 19 ಹಾಗೂ ರೋಲಿಂಗ್ ಕಪ್ ಹಾಗೂ ಉತ್ತಮವಾಗಿ ನಿರ್ವಹಿಸಿದ ಆಲಂಕಾರಿಕ ತೋಟಗಳಿಗೆ 2 ಪಾರಿತೋಷಕಗಳನ್ನು ಮುಡಿಗೇರಿಸಿಕೊಂಡಿದೆ. ಜ.24ರಂದು ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬಹುಮಾನ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News