ಫೆ.1ರಿಂದ ಅರೆಬಿಕ್ ಪರೀಕ್ಷೆಗಳು
Update: 2016-01-23 23:52 IST
ಬೆಂಗಳೂರು, ಜ. 23: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಅರೆಬಿಕ್ ಪರೀಕ್ಷೆಗಳಾದ ಉಸ್ತಾನಿಯಾ, ಫೌಕಾನಿಯಾ, ಅಫ್ಝಲುಲ್ ಉಲ್ಮಾ- ಮಧ್ಯಮ, ಅಫ್ಝಲುಲ್-ಉಲ್ಮಾ ಉತ್ತಮ ಪರೀಕ್ಷೆಗಳು ಫೆ.1ರಿಂದ ರಾಜ್ಯದ 31 ಪರೀಕ್ಷಾ ಕೇಂದ್ರಗಳಲ್ಲಿ ನಡೆಸುತ್ತಿದೆ.
ಈ ಸಂಬಂಧಿಸಿದ ಗೌಪ್ಯ ಲೇಖನ ಸಾಮಗ್ರಿಗಳು, ಸುತ್ತೋಲೆಗಳು ಇತ್ಯಾದಿಗಳನ್ನು ಆಯಾ ಜಿಲ್ಲಾ ಡಯಟ್‌ಗಳಿಗೆ ಕಳುಹಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಅಭಿರಕ್ಷಕರು ಜಿಲ್ಲಾ ಡಯಟ್ ಪ್ರಾಂಶುಪಾಲರನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದು. ಪ್ರವೇಶ ಪತ್ರಗಳನ್ನು ಸಂಬಂಧಿಸಿದ ಅರೇಬಿಕ್ ಶಾಲೆಗಳಿಗೆ ಕಳುಹಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.