ಯುವಕನ ಆತ್ಮಹತ್ಯೆ
Update: 2016-01-25 23:57 IST
ಬೆಂಗಳೂರು, ಜ. 25: ಕೆಲಸ ಸಿಗದೆ ಬೇಸತ್ತ ನಿರುದ್ಯೋಗಿ ಯುವಕ ನೇಣಿಗೆ ಶರಣಾಗಿರುವ ಘಟನೆ ಪುಲಕೇಶಿನಗರದ ದೊಡ್ಡಕುಂಟೆಯಲ್ಲಿ ಕಳೆದ ರಾತ್ರಿ ನಡೆದಿದೆ.
ದೊಡ್ಡಕುಂಟೆಯ ಕಲ್ಲೂರಮ್ಮ ಕೊಳಗೇರಿಯ ರಾಮು (22) ಆತ್ಮಹತ್ಯೆ ಮಾಡಿಕೊಂಡ ಯುವಕ.
ಎಸ್ಸೆಸ್ಸೆಲ್ಸಿ ಮುಗಿಸಿದ್ದ ರಾಮು ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದು, ಉದ್ಯೋಗ ದೊರೆಯದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.