ಸೌದಿಯಲ್ಲಿ 10000 ರಿಯಲ್‌ಗಿಂತ ಹೆಚ್ಚು ಸಂಬಳ ಗಳಿಸುವವರಲ್ಲಿ ವಿದೇಶಿಗಳ ಸಂಖ್ಯೆ ಹೆಚ್ಚಿದೆ.

Update: 2016-01-28 11:05 GMT

ರಿಯಾದ್: ಸ್ವದೇಶಿಗಳಿಗೆ ಹೋಲಿಸಿದರೆ ಸೌದಿಯಲ್ಲಿ ಹೆಚ್ಚು ಸಂಬಳ ಪಡೆಯುತ್ತಿರುವವರು ವಿದೇಶಿಯರು ಎಂದು ಜನರಲ್ ಆರ್ಗನೈಝೇಸೇಶನ್ ಫಾರ್ ಸೋಶಿಯಲ್ ಇನ್ಶೂರೆನ್ಸ್(ಗೋಸಿ) ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಕಡಿಮೆ ಸಂಬಳ ಸಿಗುವವರೂ ವಿದೇಶಿಗಳೆಂದು ಅದು ಹೇಳಿದೆ. ಗೋಸಿ ಹೊರಬಿಟ್ಟ ಲೆಕ್ಕ ಪ್ರಕಾರ 2,27,533 ವಿದೇಶಿಗಳು 10,000 ರಿಯಲ್‌ವರೆಗೂ ಪ್ರತಿ ತಿಂಗಳಲ್ಲಿ ಸಂಬಳ ಪಡೆಯುತ್ತಿದ್ದಾರೆ. ಅದೇ ವೇಳೆ 1,91,512 ಸ್ವದೇಶಿಗಳಿಗೆ ಇಷ್ಟು ಸಂಬಳ ಇರುವುದು. 5000ದಿಂದ 10000 ತಿಂಗಳ ವೇತನ ಪಡೆಯುವ ವಿದೇಶಿಗಳ ಸಂಖ್ಯೆ 3,08,821ಆಗಿದೆ.

ಇದೇ ವಿಭಾಗದಲ್ಲಿ ಬರುವ ಸ್ವದೇಶಿಗಳ ಸಂಖ್ಯೆ 2,8015ಆಗಿದೆ. 3000 ದಿಂದ 5000ವರೆಗೆ ಸಂಬಳ ಪಡೆಯುವವರಲ್ಲಿ ಹೆಚ್ಚಿರುವುದು ಸ್ವದೇಶಿಗಳಾಗಿದ್ದಾರೆ. ಅವರಸಂಖ್ಯೆ11,97,000 ಆಗಿದೆ. ಈ ವಿಭಾಗದಲ್ಲಿ ವಿದೇಶಿಗಳು 4,32,246 ಆಗಿದ್ದಾರೆ. 1500 ರಿಯಲ್‌ಗಿಂತ ಕಡಿಮೆ ಸಂಬಳ ಪಡೆಯುವವರಲ್ಲಿ ಹೆಚ್ಚಿರುವುದು ವಿದೇಶಿಗಳಾಗಿದ್ದಾರೆ.

6,259,495 ಮಂದಿ ಕಡಿಮೆ ಸಂಬಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. 28,074 ಸೌದಿಗಳು ಮಾತ್ರ 1500 ರಿಯಲ್ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಗೋಸಿಯಲ್ಲಿ ನೋಂದಾಯಿತರಲ್ಲಿ ಹೆಚ್ಚಿನವರು ವಿದೇಶಿಗಳಾಗಿದ್ದಾರೆ. 81,97,673 ಮಂದಿ ಈಗ ನೋಂದಾಯಿಸಲ್ಪಟ್ಟಿರುವವರಾಗಿದ್ದಾರೆ. ಇವರಲ್ಲಿ 1,85,420 ಮಂದಿ ಮಹಿಳೆಯರು. 16,98,097 ಮಂದಿ ಸೌದಿಗಳು ಮಾತ್ರ ನೋಂದಾಯಿತರಾಗಿದ್ದಾರೆ. ಇವರಲ್ಲಿ ಹೆಚ್ಚಿರುವುದು ಪುರುಷರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News