×
Ad

ಸಚಿವ ಪರಮೇಶ್ವರ್ ನಾಯಕ್ ಅವರ ಮೊಬೈಲ್ ಕರೆ ಸ್ವೀಕರಿಸದ್ದಕ್ಕೆ ಡಿವೈಎಸ್ಪಿ ಅನುಪಮಾ ಶೆಣೈಗೆ ಸುದೀರ್ಘ ರಜೆ ಶಿಕ್ಷೆ

Update: 2016-01-29 19:48 IST

ಬೆಂಗಳೂರು,ಜ.29- ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಅವರ ಮೊಬೈಲ್ ಕರೆ ಸ್ವೀಕರಿಸದ್ದಕ್ಕೆ ವರ್ಗಾವಣೆಗೊಂಡಿರುವ ಡಿವೈಎಸ್ಪಿ ಅನುಪಮಾ ಶೆಣೈ ಅವರನ್ನು ರಾಜ್ಯ ಸರ್ಕಾರ ಸುದೀರ್ಘ ರಜೆ ಮೇಲೆ ಕಳುಹಿಸಿ ಶಿಕ್ಷೆ ನೀಡಿದೆ.

ಅನುಪಮಾ ಶೆಣೈ ಅವರನ್ನು ವರ್ಗಾವಣೆ ಮಾಡಿರುವ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಅವರನ್ನು ಒಂದು ವಾರಗಳ ಕಾಲ ಸರ್ಕಾರ ರಜೆಯಲ್ಲಿ ಕಳುಹಿಸಿತ್ತು. ಆದರೆ ಈಗ ಈ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ರಾಜ್ಯ ಸರ್ಕಾರ ಅವರನ್ನು ಬಲವಂತವಾಗಿ ಸುದೀರ್ಘ ರಜೆ ನೀಡಿ ಕಳುಹಿಸಿದೆ.

ರಜೆಯಲ್ಲಿ ಅನುಪಮಾ ಅವರನ್ನು ಕಳುಹಿಸಿದ್ದು ಮಾತ್ರವಲ್ಲದೇ ಹಿರಿಯ ಪೊಲೀಸ್ ಅಧಿಕಾರಿಗಳು ಮೌಖಿಕ ಸೂಚನೆ ನೀಡಿ ವರ್ಗಾವಣೆ ವಿಚಾರದ ಬಗ್ಗೆ ಯಾರಲ್ಲೂ ಮಾತನಾಡಬಾರದು. ಮಾತನಾಡುವುದಾಗಲಿ ಅಸಮಾಧಾನ ತೋಡಿ ಕೊಳ್ಳುವುದಾಗಲಿ ಮಾಡಿ ಇಲಾಖೆಯ ಮಾಹಿತಿ ಬಹಿರಂಗವಾದರೆ ಫೋನ್ ಕರೆ ಮಾಹಿತಿಯನ್ನು ತೆಗೆಯಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಅವರ ಬಳ್ಳಾರಿಯ ತುಘಲಕ್ ದರ್ಬಾರ್‌ಗೆ ಸಂಬಂಧಿಸಿದಂತೆ ಒಂದೊಂದೆ ಸುದ್ದಿಗಳು ಪ್ರಕಟಗೊಳ್ಳುತ್ತಿದ್ದು,ಈಗ ಅನುಪಮಾ ಶೆಣೈ ಅವರನ್ನು ಸುದೀರ್ಘ ರಜೆ ಮೇಲೆ ಕಳುಹಿಸಿದ್ದು ಮತ್ತೊಂದು ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ.ಇನ್ನೂ ಸಚಿವ ಪರಮೇಶ್ವರ ನಾಯಕ್ ಅವರು ನಗರಕ್ಕೆ ಬರುವ ಪೂರ್ವ ನಿರ್ಧರಿತ ಭೇಟಿ ರದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News