ವಿಜಯಕುಮಾರ್ ಕಾರ್ಕಳ
Update: 2016-02-01 20:11 IST
ಮೂಡುಬಿದಿರೆ: ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವಿಜಯಕುಮಾರ್ ಕಾರ್ಕಳ (62) ಜ. 26ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೂಲತಃ ಕಾರ್ಕಳ ತಾಲೂಕಿನ ಇರ್ವತ್ತೂರಿನವರಾದ ಇವರು ಅಸ್ಸಾಂ, ಗುಜರಾತ್, ಪೂನಾ, ಮುಂಬಯಿ, ಬೆಂಗಳೂರು, ಮಂಗಳೂರು ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರಾಂಶುಪಾಲರಾಗಿ ಸುಮಾರು 35ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು ಅವರಿಗೆ ಪತ್ನಿ ಪುತ್ರ, ಪುತ್ರಿ ಇದ್ದಾರೆ.