ಪ್ರತ್ಯೇಕ ಪ್ರಕರಣ: 1.35 ಕೋಟಿ ರೂ.ಸೊತ್ತು ವಶ; 16 ಮಂದಿ ಆರೋಪಿಗಳ ಬಂಧನ
Update: 2016-02-01 23:49 IST
ಬೆಂಗಳೂರು, ಫೆ. 1: ಇಲ್ಲಿನ ಪಶ್ಚಿಮ ವಿಭಾಗದ ಉಪ್ಪಾರಪೇಟೆ, ಕಲಾಸಿಪಾಳ್ಯ, ಕಾಟನ್‌ಪೇಟೆ ಠಾಣಾ ಪೊಲೀಸರು ಸರ ಅಪಹರಣ, ಚಿನ್ನಾಭರಣ ಕಳವು, ವಾಹನ ಕಳವು ಪ್ರಕರಣ ಸಂಬಂಧ 16 ಮಂದಿಯನ್ನು ಬಂಧಿಸಿದ್ದು, 1.35 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ ನಗದು, ಕಾರು, ಚಿನ್ನಾಭರಣ, ದ್ವಿಚಕ್ರ ವಾಹನಗಳು ಸೇರಿದಂತೆ ಕಳವು ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಮೇಲ್ಕಂಡ ಆರೋಪಿಗಳ ಬಂಧನದಿಂದ ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದು, 100ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.