×
Ad

ಟೆಂಪೋ ಹರಿದು ಮಗು ಸಾವು

Update: 2016-02-03 23:59 IST

ಬೆಂಗಳೂರು, ಫೆ.3: ಕಾರ್ಖಾನೆಯೊಂದರ ಆವರಣದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಟೆಂಪೋ ಹರಿದು ಮಗು ಸಾವನ್ನಪ್ಪಿರುವ ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಕೀರ್ತಿಕಾ ಎಂಟರ್ ಪ್ರೈಸಸ್ ಕಾರ್ಖಾನೆಯ ನೌಕರ ಶಿವಶಂಕರ್ ಎಂಬವರ ಪುತ್ರ ಒಂದೂ ವರೆ ವರ್ಷದ ಭಜರಂಗಿ ಮೃತಪಟ್ಟ ಮಗು. ಬುಧವಾರ ಬೆಳಗ್ಗೆ ಕಾರ್ಖಾನೆ ಆವರಣ ದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರ್ಖಾನೆಗೆ ಸರಕುಗಳನ್ನು ಸಾಗಿಸುವ ಟೆಂಪೋ, ಕಾರ್ಖಾನೆ ಆವರಣದಿಂದ ಹೊರಬರುತ್ತಿರುವ ವೇಳೆ ಢಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂ ಡಿದ್ದ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಈ ಬಗ್ಗೆ ಬಾಣಸವಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News