×
Ad

ಮಾಜಿ ಸಚಿವ ಎಂ.ಎಂ.ನಾಣಯ್ಯ ನಿಧನಕ್ಕೆ ಸಿಎಂ ಸಂತಾಪ

Update: 2016-02-08 23:48 IST

ಬೆಂಗಳೂರು, ಫೆ. 8: ಮಾಜಿ ಸಚಿವ ಎಂ.ಎಂ.ನಾಣಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಅಪಾರ ಕಳಕಳಿ ಹಾಗೂ ಕಾಳಜಿ ಹೊಂದಿದ್ದ ನಾಣಯ್ಯ ಅವರು ಸದಾ ಕಾಲ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳತ್ತ ವಿಶೇಷ ಗಮನಹರಿಸುತ್ತಿದ್ದರು. ಅಲ್ಲದೆ, ಸ್ಥಳೀಯರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ಸದಾ ನೇರ ಮಾತಿನ ನಾಣಯ್ಯ ಅವರು ಸ್ನೇಹಜೀವಿ ನಾಣಯ್ಯ ಅವರು ಎಂದೂ ಒತ್ತಡ ಹಾಗೂ ಒತ್ತಾಯಗಳಿಗೆ ಮಣಿದವರಲ್ಲ. ಅಧಿಕಾರಿಗಳ ವರ್ಗಾವಣೆಗಳಲ್ಲಿ ಎಂದೂ ಹಸ್ತಕ್ಷೇಪ ಮಾಡಿದವರಲ್ಲ. ಕರ್ನಾಟಕ ಪಾನೀಯ ನಿಗಮವು ನಾಣಯ್ಯ ಅವರ ದೂರದೃಷ್ಟಿ ಹಾಗೂ ಪರಿಕಲ್ಪನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ನಾಣಯ್ಯ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ನಾಣಯ್ಯ ಅವರ ಕುಟುಂಬ ಹಾಗೂ ಅಭಿಮಾನಿ ವರ್ಗಕ್ಕೆ ಶ್ರೀಯುತರ ಅಗಲಿಕೆಯಿಂದ ಉಂಟಾದ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಸಿಎಂ ತಮ್ಮ ಪ್ರಕಟನೆಯಲ್ಲಿ ಪ್ರಾರ್ಥಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News