×
Ad

ಗ್ರಂಥಾಲಯಗಳಿಗೆ ಪುಸ್ತಕ ಆಯ್ಕೆ

Update: 2016-02-08 23:53 IST

ಬೆಂಗಳೂರು, ಫೆ. 8: 2015ನೆ ವರ್ಷದಲ್ಲಿ ಜುಲೈ 1ರಿಂದ ಡಿ.31ರ ವರೆಗೆ ಪ್ರಥಮವಾಗಿ ಪ್ರಕಟಗೊಂಡ ಸಾಹಿತ್ಯ, ಲಲಿತಕಲೆ, ವಿಜ್ಞ್ಞಾನ, ಮಾನವಿಕ, ವೈದ್ಯಕೀಯ, ತಾಂತ್ರಿಕ, ಪರಾಮರ್ಶನ ಕೃತಿಗಳು ಹಾಗೂ ಮಕ್ಕಳ ಸಾಹಿತ್ಯ, ನವಸಾಕ್ಷರರ ಕೃತಿಗಳು ಇತ್ಯಾದಿ ವಿಷಯಗಳ ಕನ್ನಡ-ಆಂಗ್ಲ ಹಾಗೂ ಇತರೆ ಭಾರತೀಯ ಭಾಷೆಯ ಗ್ರಂಥಗಳ ಆಯ್ಕೆಗೆ ಲೇಖಕರು, ಲೇಖಕ-ಪ್ರಕಾಶಕರು ಪ್ರಕಟನಾ ಸಂಸ್ಥೆಗಳಿಂದ ಎರಡನೆ ಹಂತದಲ್ಲಿ ಪುಸ್ತಕಗಳನ್ನು ಆಹ್ವಾನಿಸಿದೆ.

ಪುಸ್ತಕಗಳು ನಿಬಂಧನೆಗಳಿಗೆ ಅನುಗುಣ ವಾಗಿರಬೇಕು. ಎರಡನೆ ಹಂತದ ಸ್ವೀಕೃತಿ (ಜುಲೈ 2015ರಿಂದ ಡಿಸೆಂಬರ್ 2015ರ ವರೆಗೆ) 2015ರ ದ್ವಿತೀಯ ಹಂತದಲ್ಲಿ 1 ಜುಲೈ 2015ರಿಂದ ಡಿಸೆಂಬರ್ 2015ರ ವರೆಗೆ ಪ್ರಕಟನೆೆಯಾದ ಪುಸ್ತಕಗಳನ್ನು ಗ್ರಂಥಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಪುಸ್ತಕಗಳನ್ನು ಫೆ.20ರ ಒಳಗೆ ಕಾಪಿರೈಟ್ ಮಾಡಿಸಿರಬೇಕು. 2016ರ ಫೆ.20ರೊಳಗೆ ಕಾಪಿರೈಟ್ ಮಾಡಿಸಿರುವ ಪುಸ್ತಕಗಳನ್ನು ಆಯ್ಕೆಗಾಗಿ ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು (ನೋಂದಣಿ ಪತ್ರದ ಪ್ರತಿಯೊಂದಿಗೆ) ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೆ ಮಹಡಿ, ಡಾ.ಅಂಬೇಡ್ಕರ್ ವೀಧಿ, ಬೆಂಗಳೂರು-560 001 ಇಲ್ಲಿಗೆ ಫೆ.20ರ ಸಂಜೆ 5:30ರ ಒಳಗಾಗಿ ಸಲ್ಲಿಸಲು ಪ್ರಕಟನೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News