ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು, ಫೆ. 8: ಬೆಂಗಳೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದಲ್ಲಿ ‘ಎನ್ಹಾನ್ಸ್ಡ್ ಪರ್ಫಾರ್ಮೆನ್ಸ್ ಸೆನ್ಸಿಟಿವಿಟಿ ಇನ್ ಕ್ವಾಂಟಮ್ ಟಾರ್ಗೆಟ್ ಡಿಟೆಕ್ಷನ್, ಡಿಜಿಟಲ್ ಮೆಮೋರಿ ರೀಡಿಂಗ್ ಆ್ಯಂಡ್ ಎಸ್ಟಿಮೇಷನ್ ಥಿಯರಿ ಯೂಸಿಂಗ್ ಎಂಟಾಂಗಲ್ಡ್ ಸ್ಟೇಟ್ಸ್’ ಎಂಬ ವಿಷಯದ ಬಗೆಗಿನ ಯುಜಿಸಿ ಮೇಜರ್ ರಿಸರ್ಚ್ ಪ್ರೊಜೆಕ್ಟಿನಲ್ಲಿ ಸಂಶೋಧನೆ ಕೈಗೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಪ್ರೊಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕನಿಷ್ಠ 55% ಅಂಕಗಳನ್ನು (ಎಸ್ಸಿ ಎಸ್ಟಿ ಅಭ್ಯರ್ಥಿಗಳಾದಲ್ಲಿ ಕನಿಷ್ಠ 50% ಅಂಕಗಳು) ಹೊಂದಿರಬೇಕು. ಅರ್ಜಿ ಸಲ್ಲಿಸಲು ಇಚ್ಛಿಸುವವರು ತಮ್ಮ ಭಾವಚಿತ್ರ, ವಿದ್ಯಾರ್ಹತೆ, ವಿಳಾಸ, ಇಮೇಲ್ ವಿಳಾಸ ಮತ್ತಿತರ ಸ್ವವಿವರಗಳೊಂದಿಗೆ ಫೆ. 25ರೊಳಗೆ, ಡಾ.ಎ.ಎಲ್.ಉಷಾದೇವಿ, ಭೌತಶಾಸ್ತ್ರ ವಿಭಾಗ, ಬೆಂಗಳೂರು ವಿವಿ, ಬೆಂಗಳೂರು-560 056 ಇವರಿಗೆ ತಮ್ಮ ಅರ್ಜಿಗಳನ್ನು ಕಳುಹಿಸಬಹುದು. ಸಾಫ್ಟ್ ಕಾಪಿಗಳನ್ನು ಕೂಡ ushadevi@bub.ernet.in ವಿಳಾಸಕ್ಕೆ ಕಳುಹಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.