ಸಿಟಿಜೆ ಗೊನ್ಸಾಲ್ವೆಸ್

Update: 2016-02-09 18:06 GMT

ಮಂಗಳೂರು, ಫೆ.9: ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕ ಸಿಟಿಜೆ ಗೊನ್ಸಾಲ್ವೆಸ್ (75)ಸೋಮವಾರ ನಿಧನರಾದರು.
ಕ್ಲಾಡಿಯಸ್ ಥಾಮಸ್ ಜೋಸೆಫ್ ಗೊನ್ಸಾಲ್ವೆಸ್ ಅವರು ನಗರದ ಮೊಟ್ಟಮೊದಲ ಲೆಕ್ಕಪರಿಶೋಧಕ ಸಂಸ್ಥೆಯನ್ನು ಪಾಲುದಾರಿಕೆಯಲ್ಲಿ ಆರಂಭಿಸಿದವರು. ಇವರ ಸಂಸ್ಥೆ ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ ಕಚೇರಿಯಲ್ಲಿ ನೋಂದಣಿಗೊಂಡ ಮೊಟ್ಟಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿತ್ತು.
2011ರಲ್ಲಿ ಇವರಿಗೆ ರಚನಾ ವೃತ್ತಿಪರ ವರ್ಷದ ವ್ಯಕ್ತಿ ಪ್ರಶಸ್ತಿ ದೊರಕಿತ್ತು. ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ