ಯುಎಇ: ಜನರಿಗೆ ಸಂತೋಷ ನೀಡಲು ಸಚಿವಾಲಯ! ಸಹಿಷ್ಣುತೆ ಕಾಪಾಡಲು ಇನ್ನೊಂದು

Update: 2016-02-10 14:13 GMT

ದುಬೈ, ಫೆ. 10: ತನ್ನ ನಾಗರಿಕರನ್ನು ಸಂತೋಷದಲ್ಲಿಡಲು ಹಾಗೂ ಹಲವು ಧರ್ಮದವರು ವಾಸಿಸುತ್ತಿರುವ ದೇಶದಲ್ಲಿ ಸಹಿಷ್ಣುತೆಯನ್ನು ಕಾಪಾಡಿಕೊಂಡು ಬರಲು ಯುನೈಟಡ್ ಅರಬ್ ಎಮಿರೇಟ್ಸ್ (ಯುಎಇ) ಎರಡು ಪ್ರತ್ಯೇಕ ಸಚಿವಾಲಯಗಳನ್ನೇ ಸೃಷ್ಟಿಸಲಿದೆ.

ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಇಳಿಕೆಯಿಂದ ಕೊಲ್ಲಿ ರಾಷ್ಟ್ರಗಳಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ . ಇದರಿಂದ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಕಡಿತವಾಗಲಿದೆ ಎಂಬ ಸುದ್ದಿಗಳ ನಡುವೆಯೇ ಈ ಪ್ರಕಟಣೆ ಬಂದಿರುವುದು ವಿಶೇಷವಾಗಿದೆ. 

ಈ ವಿಷಯವನ್ನು ದುಬೈಯ ಆಡಳಿತಗಾರ ಹಾಗೂ ಯುಎಇಯ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಸೋಮವಾರ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ದುಬೈಯಲ್ಲಿ ನಡೆದ ಜಾಗತಿಕ ಸರಕಾರಿ ಶೃಂಗ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಈ ಘೋಷಣೆಯನ್ನು ಮಾಡಿದರು.

‘‘ಇದು ನೂತನ ಶಕೆಯೊಂದರ ಆರಂಭವಾಗಿದೆ. ಜನರ ಯೋಗಕ್ಷೇಮಗಳನ್ನು ನೋಡಿಕೊಳ್ಳಲು ನಮಗೆ ಸಹಾಯ ಮಾಡು ಎಂದು ನಾವು ಅಲ್ಲಾನಲ್ಲಿ ಪ್ರಾರ್ಥಿಸುತ್ತೇವೆ’’ ಎಂದು ಒಂದು ಟ್ವಿಟ್ಟರ್ ಸಂದೇಶದಲ್ಲಿ ಅವರು ಹೇಳಿದ್ದಾರೆ.

ಆದಾಗ್ಯೂ, ಈ ಖಾತೆಗಳನ್ನು ಯಾವಾಗ ಆರಂಭಿಸಲಾಗುವುದು ಎಂಬ ಬಗ್ಗೆ ಅವರು ಸಮಯ ಮಿತಿಯನ್ನು ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News