×
Ad

ಕುಮಾರಸ್ವಾಮಿ ಪುತ್ರನಿಗೆ ಐಷಾರಾಮಿ ಕಾರು ಕೊಟ್ಟವರಾರು?ಸಿಎಂ ಸಿದ್ದರಾಮಯ್ಯ

Update: 2016-02-10 23:56 IST

ದುಬಾರಿ ‘ವಾಚ್’ ವಿವಾದ: ಗಾಜಿನಮನೆಯಲ್ಲಿ ಕುಳಿತು ಮತ್ತೊಬ್ಬರ ವಿರುದ್ಧ ಆರೋಪ ಸಲ್ಲ
ಬೆಂಗಳೂರು, ಫೆ.10: ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಗಾಜಿನಮನೆಯಲ್ಲಿ ಕುಳಿತು ಮತ್ತೊಬ್ಬರ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.

ಬುಧವಾರ ವಿಧಾನಸೌಧ ಪಶ್ಚಿಮ ದ್ವಾರದಲ್ಲಿರುವ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ 108ನೆ ಜನ್ಮ ದಿನದ ಹಿನ್ನೆಲೆಯಲ್ಲಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಪುತ್ರನ ಬಳಿ ಕೋಟ್ಯಂತರ ರೂ.ಮೊತ್ತದ ಐಷಾರಾಮಿ ಕಾರಿದೆ. ಅದನ್ನು ಅವರ ಪುತ್ರ ದುಡಿದ ದುಡ್ಡಿನಿಂದ ಖರೀದಿಸಿದ್ದೇ ಎಂದು ಪ್ರಶ್ನಿಸಿದರು.್ಡಿಕೆಯವರ ಪುತ್ರ ಸಾರ್ವಜನಿಕ ಜೀವನದಲ್ಲಿ ಇಲ್ಲದಿದ್ದರೂ ದುಬಾರಿ ವೆಚ್ಚದ ಸಿನೆಮಾ ನಿರ್ಮಿಸುತ್ತಿದ್ದು, ಅವರ ಪುತ್ರನಿಗೆ ಕೋಟ್ಯಂತರ ರೂ.ಗಳು ಎಲ್ಲಿಂದ ಬಂತು ಎಂದು ಖಾರವಾಗಿ ಪ್ರಶ್ನಿಸಿದ ಸಿದ್ದರಾಮಯ್ಯ, ತಮ್ಮ ಬಳಿ ಇರುವ ದುಬಾರಿ ಬೆಲೆಯ ಗಡಿಯಾರ ಮತ್ತು ಕನ್ನಡಕವನ್ನು 5 ಲಕ್ಷ ರೂ.ಗಳಿಗೆ ನೀಡಲು ಸಿದ್ಧನಿದ್ದೇನೆ ಎಂದರು.
ತಾನು ದುಬಾರಿ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವುದಿಲ್ಲ. ತಮ್ಮ ಬೆಂಬಲಿಗರು ಅಥವಾ ಮತ್ತಿನ್ಯಾರೋ ಕೊಡುಗೆಯಾಗಿ ನೀಡಿದ ವಸ್ತುಗಳನ್ನು ಮುಂದಿಟ್ಟುಕೊಂಡು ಕ್ಷುಲ್ಲಕ ಹೇಳಿಕೆಗಳನ್ನು ನೀಡುವುದು ಸಲ್ಲ ಎಂದು ಸಿದ್ಧರಾಮಯ್ಯ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ನೆರವು ನೀಡಲು ಸೂಚನೆ: ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿದ್ದ ಯೋಧ ಹನುಮಂತಪ್ಪನವರ ನಿವಾಸಕ್ಕೆ ಹೊಸದಿಲ್ಲಿಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯಲ್ಲಿ ಯೋಧನ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ, ದಿಲ್ಲಿಯ ಕರ್ನಾಟಕ ಭವನದಲ್ಲಿ ಯೋಧನ ಕುಟುಂಬದವರಿಗೆ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಹೊಸದಿಲ್ಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯೋಧನನ್ನು ಭೇಟಿ ಮಾಡಿದ್ದು ಸರಿ. ಆದರೆ, ಬಿಜೆಪಿ ಮುಖಂಡರು ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಅನಗತ್ಯ ಟೀಕೆ ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.ಾಂಗ್ರೆಸ್ ಗೆಲುವು: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಎಲ್ಲ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು, ಕನಿಷ್ಠ 20 ಜಿ.ಪಂ ಹಾಗೂ ನೂರಕ್ಕೂ ಹೆಚ್ಚು ತಾಲೂಕು ಪಂಚಾಯತ್‌ಗಳಲ್ಲಿ ಪಕ್ಷ ನಿಶ್ಚಿತವಾಗಿ ಅಧಿಕಾರ ಹಿಡಿಯಲಿದೆ ಎಂದು ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.ಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದು, ಕೆಲ ಸಣ್ಣ-ಪುಟ್ಟ ಅಸಮಾಧಾನಗಳು ಸಹಜ. ಸ್ಥಳೀಯ ಮುಖಂಡರ ಅಭಿಪ್ರಾಯ ಆಧರಿಸಿ ನಿಷ್ಠಾವಂತರಿಗೆ ಟಿಕೆಟ್ ಹಂಚಿಕೆ ಮಾಡಿದ್ದು, ವಿಪಕ್ಷಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಸಿದ್ದರಾಮಯ್ಯ ನುಡಿದರು.ದರ್ಶ ವ್ಯಕ್ತಿ: ಮಾಜಿ ಸಿಎಂ ಕೆಂಗಲ್ ಹನುಮಂತಯ್ಯನವರು ದಕ್ಷ ಆಡಳಿತಗಾರ. ಅವರು ಮಾಡಿದ ಜನಸೇವೆ ಸ್ಮರಣೀಯ. ಅತ್ಯಂತ ಸುಂದರವಾದ ವಿಧಾನಸೌಧವನ್ನು ದೇಶಕ್ಕೆ ನಿರ್ಮಿಸಿಕೊಟ್ಟ ಕೀರ್ತಿ ಹನುಮಂತಯ್ಯನವರಿಗೆ ಸಲ್ಲಬೇಕು. ಅವರ ಆದರ್ಶ ಅನುಕರಣೀಯ ಎಂದು ಸಿದ್ದರಾಮಯ್ಯ ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News