×
Ad

ಹೆಬ್ಬಾಳ ಉಪ ಚುನಾವಣೆ

Update: 2016-02-10 23:58 IST

ಮತ ಚಲಾಯಿಸಲು ದಾಖಲೆ ಹಾಜರು ಕಡ್ಡಾಯ

ಬೆಂಗಳೂರು, ಫೆ. 10: ಹೆಬ್ಬಾಳ ಕ್ಷೇತ್ರದ ಉಪ ಚುನಾವಣೆ ವೇಳೆ ಚುನಾವಣಾ ಆಯೋಗ ನಿರ್ದೇಶನದಂತೆ ಮತದಾನಕ್ಕೆ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಹೊಂದಿರುವವರು ಅದನ್ನು ತಪ್ಪದೇ ಹಾಜರುಪಡಿಸಬೇಕು ಎಂದು ಸೂಚಿಸಲಾಗಿದೆ.

ಸದರಿ ದಾಖಲೆಗಳನ್ನು ಹೊಂದದೆ ಇರುವವರು ಪಾಸ್‌ಪೋರ್ಟ್, ಚಾಲನಾ ಪರವಾನಿಗೆ, ಬ್ಯಾಂಕ್ ಪಾಸ್‌ಬುಕ್, ಪ್ಯಾನ್‌ಕಾರ್ಡ್, ಸ್ಮಾರ್ಟ್‌ಕಾರ್ಡ್ ಸೇರಿದಂತೆ ಚುನಾವಣಾ ಆಯೋಗ ನಿಗದಿಪಡಿಸಿರುವ ಹನ್ನೊಂದು ಬಗೆಯ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಹಾಜರುಪಡಿಸಿ ತಮ್ಮ ಹಕ್ಕು ಚಲಾಯಿಸಬಹುದೆಂದು ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News