ಮಹಿಳಾ ಉದ್ಯಮಿಗಳ ಪಾರ್ಕ್ ಸ್ಥಾಪನೆ

Update: 2016-02-12 18:27 GMT

ಬೆಂಗಳೂರು, ಫೆ.12: ರಾಮನಗರ ಜಿಲ್ಲೆಯ ಕನಕಪುರ ತಾಲೂಕು ವ್ಯಾಪ್ತಿಯಲ್ಲಿನ ಹಾರೋಹಳ್ಳಿಯಲ್ಲಿ ‘ಪ್ರತ್ಯೇಕ ಮಹಿಳಾ ಉದ್ಯಮಿಗಳ ಪಾರ್ಕ್’ ಸ್ಥಾಪನೆಗೆ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ ಮುಂದಾಗಿದೆ.

ಕರ್ನಾಟಕ ಮಹಿಳಾ ಸಂಘಗಳ ಅಧ್ಯಕ್ಷರು, ಮಹಿಳಾ ವಾಸ್ತು ಶಿಲ್ಪಿಗಳು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರಿಗಳ ಸಭೆಯ ನಂತರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕೆ.ರತ್ನ ಪ್ರಭಾ ಪಾರ್ಕ್ ಸ್ಥಾಪನೆಯ ಬಗ್ಗೆ ಮಾಹಿತಿ ನೀಡಿದರು. ದೇಶಕ್ಕೆ ಒಂದು ಮಾದರಿಯಾಗಿ ಹಾರೋಳ್ಳಿಯಲ್ಲಿ ಪಾರ್ಕ್ ನಿರ್ಮಾಣ ಮಾಡುವುದಾಗಿ ಹೇಳಿದ ಅವರು, ಇದು ವಿಶ್ವ ದರ್ಜೆಯ ಸೌಲಭ್ಯಗಳ ಜೊತೆಗೆ ಅತ್ಯಾಧುನಿಕ ಮೂಲ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಅಲ್ಲದೆ, ಈಗಾಗಲೇ ಹಾರೋಹಳ್ಳಿ ಪಾರ್ಕ್ ಬಗ್ಗೆ ವಾಸ್ತು ಶಿಲ್ಪಿಗಳಿಂದ ಅಗತ್ಯ ಮಾಹಿತಿ ಪಡೆಯಲಾಗಿದೆ ಎಂದರು.

   ಇದೇ ಫೆ.28ರ ವೇಳೆಗೆ ವಿವರವಾದ ಯೋಜನಾ ವರದಿ ಸಿದ್ಧಪಡಿಸಲು ಕೆಐಎಡಿಬಿಗೆ ಸೂಚಿಸಿದ್ದು, ಭಾರತ ಸರಕಾರ, ಎಂಎಸ್‌ಎಂಇ ಇಲಾಖೆಯು ಎಂಎಸ್‌ಇ-ಸಿಡಿಪಿ ಯೋಜನೆ ಅಡಿಯಲ್ಲಿ ಈ ಪಾರ್ಕ್‌ನ್ನು ಅನುಮೋದಿಸಿದ್ದು, 8 ಕೋಟಿ ರೂ. ಅನುದಾನ ನೀಡಲು ತಾತ್ವಿಕ ಒಪ್ಪಿಗೆ ನೀಡಿದೆ. ಅಲ್ಲದೆ, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ 45 ಮಹಿಳೆಯರು ಪಾರ್ಕ್‌ನಲ್ಲಿ ಪ್ಲಾಟ್‌ಗಳ ಹಂಚಿಕೆ ಪಡೆಯಲು ಆಸಕ್ತಿ ಹೊಂದಿ ನೋಂದಣಿಗಾಗಿ ಮುಂದಾಗಿದ್ದಾರೆ ಎಂದು ರತ್ನ ಪ್ರಭಾ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News