ಉತ್ತರ ಕೊರಿಯ ವಿರುದ್ಧ ಇನ್ನಷ್ಟು ದಿಗ್ಬಂಧನೆ ಅಮೆರಿಕದ ಮಸೂದೆ ಅಂಗೀಕಾರ

Update: 2016-02-13 14:37 GMT

ವಾಶಿಂಗ್ಟನ್, ಫೆ. 13: ಉತ್ತರ ಕೊರಿಯದ ಪರಮಾಣು ಕಾರ್ಯಕ್ರಮ, ಮಾನವಹಕ್ಕುಗಳ ಉಲ್ಲಂಘನೆ ಮತ್ತು ಸೈಬರ್ ಅಪರಾಧಗಳಿಗಾಗಿ ಆ ದೇಶವನ್ನು ಶಿಕ್ಷಿಸಲು ಇನ್ನಷ್ಟು ದಿಗ್ಬಂಧನೆಗಳನ್ನು ವಿಧಿಸುವ ಮಸೂದೆಯೊಂದನ್ನು ಅಮೆರಿಕದ ಪ್ರತಿನಿಧಿ ಸಭೆ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) ಭಾರೀ ಬಹುಮತದಿಂದ ಅಂಗೀಕರಿಸಿದೆ ಹಾಗೂ ಅದನ್ನು ಅಧ್ಯಕ್ಷ ಬರಾಕ್ ಒಬಾಮರ ಸಹಿಗಾಗಿ ಕಳುಹಿಸಿಕೊಡಲಾಗಿದೆ. ಅಧ್ಯಕ್ಷರ ಸಹಿ ಬಳಿಕ ಅದು ಕಾನೂನಾಗಿ ಪರಿವರ್ತನೆಯಾಗಲಿದೆ.
ಅಮೆರಿಕದ ನಿಲುವನ್ನು ಉತ್ತರ ಕೊರಿಯಕ್ಕೆ ಹಾಗೂ ವಿಶ್ವಸಂಸ್ಥೆ ಮತ್ತು ಇತರ ಸರಕಾರಗಳಿಗೆ, ಅದರಲ್ಲೂ ಮುಖ್ಯವಾಗಿ ಚೀನಾಕ್ಕೆ ಸ್ಪಷ್ಟಪಡಿಸಲು ಸಂಸದರು ಬಯಸಿದರು. ಚೀನಾ ಉತ್ತರ ಕೊರಿಯದ ಪ್ರಮುಖ ಮಿತ್ರ ದೇಶ ಹಾಗೂ ಪ್ರಧಾನ ವ್ಯಾಪಾರಿ ಪಾಲುದಾರನಾಗಿದೆ.
ಉತ್ತರ ಕೊರಿಯದ ವಿರುದ್ಧ ದಿಗ್ಬಂಧನೆಗಳನ್ನು ವಿಧಿಸುವುದು ಹಾಗೂ ಅದರೊಂದಿಗೆ ವ್ಯಾಪಾರ ನಡೆಸುವವರ ವಿರುದ್ಧ ‘‘ಎರಡನೆ ಹಂತದ’’ ದಿಗ್ಬಂಧನೆಗಳನ್ನು ವಿಧಿಸುವುದಕ್ಕೆ ಮಸೂದೆ ಅನುವು ಮಾಡಿಕೊಡುತ್ತದೆ.
ಮಸೂದೆಯು 408-2 ಮತಗಳಿಂದ ಅಂಗೃಕೃತವಾಯಿತು. ಇದಕ್ಕೂ ಮೊದಲು ಬುಧವಾರ ಮಸೂದೆಯು ಸೆನೆಟ್‌ನಲ್ಲಿ 96-0 ಮತಗಳ ಅಂತರದಿಂದ ಅಂಗೀಕಾರಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News