×
Ad

ರಶ್ಯದ ಅಧ್ಯಕ್ಷರಾಗಿ 5ನೇ ಬಾರಿ ಆಯ್ಕೆ | ಪ್ರಮಾಣವಚನ ಸ್ವೀಕರಿಸಿದ ಪುಟಿನ್

Update: 2024-05-07 22:47 IST

 ವ್ಲಾದಿಮಿರ್ ಪುಟಿನ್ |  PC : NDTV 

ಮಾಸ್ಕೋ: ರಶ್ಯದ ಅಧ್ಯಕ್ಷರಾಗಿ 5ನೇ ಬಾರಿ ವ್ಲಾದಿಮಿರ್ ಪುಟಿನ್ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದು, ಅಮೆರಿಕ ಸೇರಿದಂತೆ ಇತರ ಹಲವು ಪಾಶ್ಚಿಮಾತ್ಯ ದೇಶಗಳು ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸಿದ್ದವು.

ಮಾರ್ಚ್‍ನಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ಭರ್ಜರಿ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ರಶ್ಯವು ಉಕ್ರೇನ್‍ನಲ್ಲಿ ನಡೆಸುತ್ತಿರುವ ಯುದ್ಧವನ್ನು ವಿರೋಧಿಸುವ ಇಬ್ಬರು ಪ್ರಮುಖ ಅಭ್ಯರ್ಥಿಗಳ ನಾಮಪತ್ರವನ್ನು ತಾಂತ್ರಿಕ ಕಾರಣ ನೀಡಿ ತಿರಸ್ಕರಿಸಿರುವ ಬಗ್ಗೆ ಅಂತರಾಷ್ಟ್ರೀಯ ಸಮುದಾಯದಿಂದ ಖಂಡನೆ, ಆಕ್ಷೇಪ ವ್ಯಕ್ತವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News