ಜಗ್‌ಮೋಹನ್ ದಾಲ್ಮಿಯಾ ಪುತ್ರಿ ಟಿಎಂಸಿಗೆ

Update: 2016-02-13 18:29 GMT

ಕೋಲ್ಕತಾ, ಫೆ.13: ಪಶ್ಚಿಮ ಬಂಗಾಳದ ಮಾಜಿ ಸಚಿವ ಹಾಗೂ ಒಂದು ಕಾಲದ ಮುಂಚೂಣಿ ಸಿಪಿಎಂ ನಾಯಕ ಅಬ್ದುರ್ ರಝಾಕ್ ಮೊಲ್ಲಾ, ಭಾರತದ ಮಾಜಿ ಕ್ರಿಕೆಟರ್ ಲಕ್ಷ್ಮೀರತನ್ ಶುಕ್ಲಾ ಹಾಗೂ ದಿವಂಗತ ಕ್ರಿಕೆಟ್ ಆಡಳಿತಗಾರ ಜಗ್‌ಮೋಹನ್ ದಾಲ್ಮಿಯಾರ ಪುತ್ರಿ ವೈಶಾಲಿ ದಾಲ್ಮಿಯಾ ಶುಕ್ರವಾರ ರಾಜ್ಯದ ಆಳುವ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ಪಕ್ಷಕ್ಕೆ ಬಲ ತುಂಬಿದ್ದಾರೆ.

ಇಲ್ಲಿ ನಡೆದ ಪಕ್ಷದ ಸಾಮಾನ್ಯ ಮಂಡಳಿಯ ಸಭೆಯೊಂದರಲ್ಲಿ, ಪಕ್ಷದ ವರಿಷ್ಠೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸಮಕ್ಷಯ ಈ ಮೂವರು ಟಿಎಂಸಿಯನ್ನು ಸೇರಿದ್ದಾರೆ.

ಮಾಜಿ ಭೂ ಸುಧಾರಣಾ ಸಚಿವ ಮೊಲ್ಲಾ, ಸೋಶಿಯಲ್ ಜಸ್ಟೀಸ್ ಫೋರಂ ಎಂಬ ಸಂಘಟನೆ ಸ್ಥಾಪಿಸಿದ ಬಳಿಕ, 2014ರಲ್ಲಿ ಅವರನ್ನು ಸಿಪಿಎಂ, ಪಕ್ಷದಿಂದ ಉಚ್ಚಾಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News