ಕಳೆದ ತಿಂಗಳು ಆಧುನಿಕ ಕಾಲದ ಅತ್ಯಂತ ಬಿಸಿಯ ಜನವರಿ

Update: 2016-02-18 14:35 GMT

ವಾಶಿಂಗ್ಟನ್, ಫೆ. 18: ಈ ವರ್ಷದ ಜನವರಿ ತಿಂಗಳು ಆಧುನಿಕ ಕಾಲದಲ್ಲೇ ಅತ್ಯಂತ ಬಿಸಿಯ ಜನವರಿಯಾಗಿತ್ತು ಎಂಬುದನ್ನು ಅಮೆರಿಕದ ಅಂಕಿಸಂಖ್ಯೆಗಳು ಹೇಳಿವೆ.

ಭೂಮಿಯ ನೆಲ ಮತ್ತು ಸಾಗರಗಳ ಮೇಲ್ಮೈಯ ಸರಾಸರಿ ಉಷ್ಣತೆ ಜನವರಿ ತಿಂಗಳಿಗಾಗಿನ 20ನೆ ಶತಮಾನದ ಸರಾಸರಿಗಿಂತ 1.04 ಡಿಗ್ರಿ ಸೆಲ್ಸಿಯಸ್‌ನಷ್ಟು ಅಧಿಕವಾಗಿತ್ತು ಎಂದು ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ ಹೇಳಿದೆ.

ಇದು 1880ರಲ್ಲಿ ದಾಖಲೀಕರಣ ಆರಂಭಗೊಂಡ ಬಳಿಕ ದಾಖಲಾದ ಜನವರಿ ತಿಂಗಳ ಅತ್ಯಧಿಕ ಸರಾಸರಿಯಾಗಿದೆ ಎಂದು ಹೇಳಿಕೆಯೊಂದರಲ್ಲಿ ಅದು ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News