ಕೇರಳ ಸರಕಾರದ ಐದು ವರ್ಷದ ಫೋನ್ ಬಿಲ್ 1,26,39,067 ರೂ.!

Update: 2016-02-21 10:12 GMT

ತಿರುವನಂತಪುರ: ಫೋನ್ ಮಾಡಿ ಕೋಟಿಗಟ್ಟಲೆ ರೂಪಾಯಿಯನ್ನು ಸರಕಾರಕ್ಕೆ ನಷ್ಟ ಮಾಡಿದ್ದಾರೆಂದು ಕೇರಳ ಸರಕಾರದ ಮೇಲೆ ಆರೋಪ ಕೇಳಿ ಬಂದಿದೆ. ಮುಖ್ಯಮಂತ್ರಿ ಮತ್ತು ಸಚಿವರುಕಳೆದ ಐದು ವರ್ಷಗಳಲ್ಲಿ 1,26,39,067 ರೂ. ಫೋನ್ ದುರುಪಯೋಗ ನಡೆಸಿದ್ದಾರೆ ಎನ್ನಲಾಗಿದೆ. ಇದು ದುರುಪಯೋಗವೋ ಸದುಪಯೋಗವೋ ಒಟ್ಟಿನಲ್ಲಿ ಬಿಲ್ ಹೆಚ್ಚಾಯಿತೆಂಬ ಆರೋಪ ಕೇಳಿಬಂದಿದೆ.

ಮುಖ್ಯಮಂತ್ರಿ, ಸಚಿವರು, ಚೀಫ್ ವಿಪ್ ಸಹಿತ 25 ಮಂದಿಯ ಬಿಲ್ ಇದು. ಈ ಅವಧಿಯಲ್ಲಿ ಸಚಿವರ ಮೊಬೈಲ್ ಫೋನ್ ಬಿಲ್ 26,14,550 ರೂ. ಆಗಿದೆ. ಲ್ಯಾಂಡ್‌ಲೈನ್ ಬಿಲ್1,00,24,517 ರೂ. ಆಗಿದೆ. ಮೊಬೈಲ್ ಫೋನ್ ಕರೆಗಳಲ್ಲಿ ಮಾಜಿ ಸಚಿವ ಸಿಎನ್ ಬಾಲಕೃಷ್ಣ 26,6277ರೂ. ಖರ್ಚು ಮಾಡಿದ್ದಾರೆ!ಮುಖ್ಯಮಂತ್ರಿಯ ಲ್ಯಾಂಡ್‌ಲೈನ್ ಬಿಲ್ 10,81,604ರೂ. ಆಗಿದೆ. ವಿವಾದಿತ ಮಹಿಳೆ ಸರಿತಾ ನಾಯರ್‌ಗೂ ವಿಧಾನಸಭೆಯ ಕ್ಲಿಪ್ ಹೌಸ್‌ನಿಂದ ಫೋನ್ ಮಾಡಲಾಗಿದೆ ಎಂಬ ಮಾಹಿತಿಯೂ ಲಭಿಸಿದೆ. ಕೇರಳದ ಮಂತ್ರಿಗಳು ಫೋನ್ ಪ್ರಿಯರೆಂಬುದು ಈ ರೀತಿ ಬಹಿರಂಗವಾಗಿದೆ.

ಮಾಜಿಸಚಿವ ಕೆ.ಎಂ. ಮಾಣಿ ಅತಿಥಿ ಸತ್ಕಾರದ ವಿಚಾರದಲ್ಲಿ ಪ್ರಥಮಸ್ಥಾನದಲ್ಲಿದ್ದಾರೆ. ಮುಖ್ಯಮಂತ್ರಿ ಉಮ್ಮನ್ ಚಾಂಡಿಗೆ ಎರಡನೆ ಸ್ಥಾನವಿದೆ. ಎಕೆ ಶಶೀಂದ್ರಎಂಬ ಶಾಸಕರೊಬ್ಬರು ಭಾರೀ ಕಡಿಮೆ ಪ್ರಯಾಣ ವೆಚ್ಚ ಪಡೆದುಕೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News