ರಾಜ್ಯಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಸುಬ್ರೋಕಮಲ್ ಮುಖರ್ಜಿ ಅವರು ನಾಳೆ ಅಧಿಕಾರ ಸ್ವೀಕಾರ
Update: 2016-02-22 17:09 IST
ಬೆಂಗಳೂರು.ಫೆ.22: ರಾಜ್ಯಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಸುಬ್ರೋಕಮಲ್ ಮುಖರ್ಜಿ ಅವರು ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆ. ಹಂಗಾಮಿ ಮುಖ್ಯನ್ಯಾಯಮೂರ್ತಿಯಾಗಿರುವ ಅವರಿಗೆ ನಾಳೆ ಸಂಜೆ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಾಜೂಭಾಯಿವಾಲಾ ಪ್ರಮಾಣ ವಚನವನ್ನು ಬೋಧಿಸಲಿದ್ದಾರೆ.