ಟ್ರೆಸ್ಸಿ ಫ್ರಾಂಕ್
Update: 2016-02-23 13:51 IST
ಮಂಗಳೂರು, ಫೆ. 23: ನಗರದ ಕಂಕನಾಡಿ ಬಳಿಯ ವಿಶ್ವಾಸ್ ಕ್ರೌನ್ ವಸತಿ ಸಮುಚ್ಚಯದ ಫ್ಲಾಟ್‌ನಲ್ಲಿ ವಾಸವಾಗಿದ್ದ ದಿವಂಗತ ಸಿಲ್ವೆಸ್ಟರ್ ಫ್ರಾಂಕ್ ಅವರ ಪತ್ನಿ ಟ್ರೆಸ್ಸಿ ಫ್ರಾಂಕ್ ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದರು.
ಅವರಿಗೆ 86 ವರ್ಷ ವಯಸ್ಸಾಗಿತ್ತು. ಮೃತರು ನಾಲ್ಕು ಗಂಡು ಹಾಗೂ ಎರಡು ಹೆಣ್ಣು ಮಕ್ಕಳ ಸಹಿತ ಅಪಾರ ಬಂಧು- ಮಿತ್ರರನ್ನು ಅಗಲಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಟ್ರೆಸ್ಸಿ ಫ್ರಾಂಕ್ ಇಂದು ಚಿಕಿತ್ಸೆ ಫಲಿಸದೆ ನಿಧನರಾದರು.
ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು, ಮಿಲಾಗ್ರಿಸ್ ಕ್ರಿಶ್ಚಿಯನ್ ಮದರ್ ಹಾಗೂ ಸಿಲ್ವೆಸ್ಟರ್ ಫ್ರಾಂಕ್ ಸೆಂಟಿನರಿ ಫೌಂಡೇಶನ್‌ನ ಸಹ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಫೆ.24ರಂದು ಮಧ್ಯಾಹ್ನ 3:30ಕ್ಕೆ ಬೆಂದೂರ್‌ನ ಸೈಂಟ್ ಸೆಬಸ್ಟಿಯನ್ ಚರ್ಚ್‌ನಲ್ಲಿ ಅಂತ್ಯಸಂಸ್ಕಾರ (ಮಾಸ್) ನೆರವೇರಲಿದೆ ಎಂದು ಮೂಲ ತಿಳಿಸಿದೆ.