ಅಬ್ದುಲ್ ಹಮೀದ್ ಎಂ.ಕೆ
Update: 2016-02-29 18:57 IST
ವಿಟ್ಲ : ಬಂಟ್ವಾಳ ಸಮೀಪದ ಅರಳ ನಿವಾಸಿ, ಪ್ಲಾಸ್ಟಿಕ್ ವ್ಯಾಪಾರಿ ಅಬ್ದುಲ್ ಹಮೀದ್ ಎಂ.ಕೆ. (52) ಅವರು ಹೃದಯಾಘಾತದಿಂದ ಶನಿವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಬಿ.ಸಿ.ರೋಡಿನಲ್ಲಿ ಪ್ಲಾಸ್ಟಿಕ್ ಕೈಚೀಲ ವ್ಯಾಪಾರಿಯಾಗಿದ್ದ ಇವರು ಸ್ಥಳೀಯವಾಗಿ ಚಿರಪರಿಚಿತರಾಗಿದ್ದರು. ಮೃತರು ಪತ್ನಿ, ಐವರು ಪುತ್ರರು ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.