×
Ad

ವಿವಿಗಳಲ್ಲಿ ವೌಲ್ಯಾಧಾರಿತ ಶಿಕ್ಷಣ ದೊರೆಯಲಿ: ಡಾ. ಕಾಪು ಮುಹಮ್ಮದ್

Update: 2016-02-29 19:40 IST

 ಫೆ. 29: ಭಾರತೀಯ ವಿಶ್ವವಿದ್ಯಾನಿಲಯಗಳು ಗುಣಮಟ್ಟದ ಶಿಕ್ಷಣದ ಜತೆಗೆ ವೌಲ್ಯಾಧಾರಿತ ಶಿಕ್ಷಣವನ್ನು ನೀಡುವಂತಾಗಬೇಕು ಎಂದು ಬೆಂಗಳೂರಿನ ಲಂಡನ್ ಅಮೆರಿಕನ್ ಸಿಟಿ ಎಜುಕೇಶನ್ ಟ್ರಸ್ಟ್‌ನ ಡೀನ್ ಮತ್ತು ಆಡಳಿತ ನಿರ್ದೇಶಕ ಡಾ. ಕಾಪು ಮುಹಮ್ಮದ್ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ತಮಿಳುನಾಡಿನ ಸೇಲಂನ ಪೆರಿಯಾರ್ ವಿಶ್ವವಿದ್ಯಾನಿಲಯದ ಪದವಿ ಕೋರ್ಸುಗಳಿಗೆ ಲಂಡನ್ ಅಮೆರಿಕನ್ ಸಿಟಿ ಎಜುಕೇಶನಲ್ ಟ್ರಸ್ಟ್‌ನಲ್ಲಿ ಅವಕಾಶ ಒದಗಿಸುವ ನಿಟ್ಟಿನಲ್ಲಿ ಎಂಒಯುಗೆ (ತಿಳುವಳಿಕಾ ಒಪ್ಪಂದ) ಸಹಿ ಹಾಕುವ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತದ ಕೆಲ ವಿಶ್ವವಿದ್ಯಾನಿಲಯಗಳಲ್ಲಿ ಮಾತ್ರವೇ ವೌಲ್ಯಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿದೆ.

ವೌಲ್ಯಾಧಾರಿತ ಶಿಕ್ಷಣವು ಜ್ಞಾನ ಆಧಾರಿತ ಶಿಕ್ಷಣ, ಎಲ್ಲಾ ಪದವಿ ಕಾರ್ಯಕ್ರಮಗಳಲ್ಲಿ ಇಂಟರ್ನ್‌ಶಿಪ್ ಜಾರಿಗೊಳಿಸುವುದು, ಉದ್ಯೋಗ ವೌಲ್ಯಗಳು, ಮಾರುಕಟ್ಟೆಯಲ್ಲಿನ ಅತ್ಯುತ್ತಮ ಉದ್ಯೋಗಾವಕಾಶಳು, ಅಧ್ಯಯನ ಪ್ರವಾಸ, ತಂತ್ರಜ್ಞಾನದ ಬಳಕೆ, ಇ- ತರಗತಿ ಅಧಿವೇಶನಗಳು, ಗುಣಮಟ್ಟದ ಬೋಧನಾ ಕಲೆ, ನೈಜ ವೌಲ್ಯಾಧಾರಿತ ಸಂಶೋಧನೆಯ ಅನುಷ್ಠಾನ ಮತ್ತು ಅಭಿವೃದ್ಧಿ ಕಾರ್ಯ ಮೊದಲಾದವುಗಳನ್ನು ಒಳಗೊಂಡಿರಬೇಕು ಎಂದವರು ಹೇಳಿದರು.

ವಿದ್ಯಾರ್ಥಿಗಳಲ್ಲಿನ ಸೃಜನಾತ್ಮಕ ಸಾಮರ್ಥ್ಯಗಳು, ಕೌಶಲ್ಯಗಳನ್ನು ಉಪಯೋಗಿಸಿಕೊಂಡು ಅವರ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು ಉದ್ದಿಮೆ ಹಾಗೂ ಅವುಗಳ ಅಭಿವೃದ್ದಿಗೆ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕವಾಗಿ ರೂಪಿಸುವಂತಾಗಬೇಕು ಎಂದು ಅವರು ಅಭಿಪ್ರಾಯಿಸಿದರು.

ಎಂಒಯುಗೆ ಸೇಲಂನ ಪೆರಿಯಾರ್ ವಿಶ್ವವಿದ್ಯಾನಿಲಯದ ಪರವಾಗಿ ಉಪ ಕುಲಪತಿ ಡಾ. ಸಿ. ಸ್ವಾಮಿನಾಥನ್ ಸಹಿ ಹಾಕಿದ್ದು, ಈ ಸಂದರ್ಭ ಡಾ. ಟ್ರಸ್ಟ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪೌಲ್ಸನ್ ಮ್ಯಾಥ್ಯೂ ಉಪಸ್ಥಿತರಿದ್ದರು.

ತಮಿಳುನಾಡು ಸರಕಾರಿ ವಿಶ್ವವಿದ್ಯಾನಿಲಯವಾಗಿರುವ ಪೆರಿಯಾರ್ ವಿಶ್ವವಿದ್ಯಾನಿಲಯ ‘ನ್ಯಾಕ್’ನಿಂದ ‘ಎ’ ಗ್ರೇಡ್ ಪಡೆದಿದೆ. ವಿಶ್ವವಿದ್ಯಾನಿಲಯ ಪದವಿಗಳು, ಕೇಂದ್ರ, ರಾಜ್ಯ ಸರಕಾರಗಳು ಮತ್ತು ಖಾಸಗಿ ವಲಯಗಳ ಉದ್ಯೋಗಕ್ಕಾಗಿ ಯುಜಿಸಿಯಿಂದ ಪರಿಗಣಿಸಲ್ಪಡುತ್ತವೆ. ಇಲ್ಲಿನ ವಿದ್ಯಾರ್ಥಿಗಳು ಎನ್‌ಇಟಿ ಮತ್ತು ಎಸ್‌ಎಲ್‌ಇಟಿ ಪರೀಕ್ಷೆಗಳು ಮತ್ತು ಯುಪಿಎಸ್‌ಸಿ,/ಟಿಎನ್‌ಪಿಎಸ್‌ಸಿ/ಆರ್‌ಆರ್‌ಬಿ/ ಬ್ಯಾಂಕ್ ಪರೀಕ್ಷೆಗಳು ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅರ್ಹರಾಗಿರುತ್ತಾರೆ.

ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯರಿಗಾಗಿ ವಿಶೇಷ ಬ್ಯಾಚ್‌ಗಳಿದ್ದು, ಪೆರಿಯಾರ್ ಯುನಿವರ್ಸಿಟಿ ಪದವಿ ಕಾರ್ಯಕ್ರಮಗಳ ದಾಖಲಾತಿಗಾಗಿ ದೂ.ಸಂ. 080- 25522256/57 ಅಥವಾ ಮೊಬೈಲ್ 9620582988/9620583477 ನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News