×
Ad

ಬೆಂವಿವಿ: ಪ್ರಬಂಧ ಮಂಡಿಸಲು ಅರ್ಜಿ ಆಹ್ವಾನ

Update: 2016-03-01 23:44 IST

ಬೆಂಗಳೂರು, ಮಾ.1: ಬೆಂಗಳೂರು ವಿಶ್ವವಿದ್ಯಾನಿಲಯ ಪ್ರದರ್ಶನ ಕಲಾ ವಿಭಾಗವು ಮಾ.29, 30 ಮತ್ತು 31ರ ವಿಶ್ವರಂಗಭೂಮಿಯ ದಿನಾಚರಣೆಯ ಅಂಗವಾಗಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿದ್ದು, ಈ ವಿಚಾರ ಸಂಕಿರಣದಲ್ಲಿ ಪ್ರಬಂಧಗಳನ್ನು ಮಂಡಿಸುವ ಆಸಕ್ತರಿಂದ ನೋಂದಣಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ.

ನೋಂದಣಿ ಮಾಡಲು, ಸಾರಾಂಶಗಳನ್ನು ಕಳುಹಿಸಲು ಹಾಗೂ ಪೂರ್ಣ ಪ್ರಬಂಧಗಳನ್ನು ಕಳುಹಿಸಲು ಮೇ 5 ಕೊನೆಯ ದಿನವಾಗಿರುತ್ತದೆ. ಆಯ್ಕೆಗೊಂಡ ಪ್ರಬಂಧಗಳನ್ನು ಪ್ರಕಟಿಸಲಾಗುತ್ತದೆ.

ಸಂಶೋಧನಾ ಪ್ರಬಂಧಗಳಿಗೆ ಸ್ಥೂಲ ವಸ್ತು ವಿಸ್ತಾರ: ಪ್ರದರ್ಶನ ಕಲೆಗಳು ಮತ್ತು ಭಾಷಾ ರಾಷ್ಟ್ರೀ ಯತೆ, ಪ್ರದರ್ಶನ ಕಲೆಗಳು ಮತ್ತು ರಾಷ್ಟ್ರ, ಜಾತಿ ಮತ್ತು ಲಿಂಗ ಪ್ರದರ್ಶನ ಕಲೆಗಳು ಮತ್ತು ಲೈಂಗಿಕ ಅಲ್ಪಸಂಖ್ಯಾತರು. ಸಾರ್ವಜನಿಕ ಸ್ಥಳಗಳು ಮತ್ತು ಪ್ರದರ್ಶನಗಳು, ಪ್ರದರ್ಶನ ಕಲೆ/ಮೂಲಕ ಪ್ರಾತಿನಿಧ್ಯದ ಪ್ರಶ್ನೆ, ಪ್ರದರ್ಶನ ಕಲೆಗಳು ಮತ್ತು ಬಹು ಸಂಸ್ಕೃತಿ ಪ್ರದರ್ಶನ ಕಲೆಗಳು ಮತ್ತು ಸಾಮಾಜಿಕ ಬದಲಾವಣೆ, ಪ್ರದರ್ಶನ ಕಲೆಗಳಲ್ಲಿನ ಬದಲಾವಣೆಗಳು, ನೃತ್ಯ ಮತ್ತು ರಂಗಭೂಮಿ, ಸಂಗೀತ ಮತ್ತು ರಂಗಭೂಮಿ, ಗೀತ ನಾಟಕ ನೃತ್ಯ ನಾಟಕ/ರೂಪಕ, ಲಲಿತ ಕಲೆ ಮತ್ತು ರಂಗಭೂಮಿ, ವಿವಿಧ ಕಲೆಗಳ ಸಮ್ಮಿಲನ, ಪ್ರದರ್ಶನ ಕಲೆಗಳ ಮೂಲಕ ಇತಿಹಾಸ, ಪ್ರದರ್ಶನ ಕಲೆಗಳಲ್ಲಿನ ರಾಜಕೀಯ ನೆಲೆಗಳು, ಪ್ರದರ್ಶನ ಕಲೆಗಳಿಗೆ ಆಶ್ರಯದ ಪ್ರಶ್ನೆಗಳು; ಅಂದು-ಇಂದು. ಪ್ರಬಂಧ ಮಂಡನೆಗೆ ಇಪ್ಪತ್ತು ನಿಮಿಷಗಳ ಕಾಲಾವಧಿ ನೀಡಲಾಗುತ್ತಿದ್ದು, ಸಂಜೆ ನಾಟಕ ಮತ್ತು ಜಾನಪದ ಪ್ರದರ್ಶನಗಳಿರುತ್ತವೆ.

ಹೆಚ್ಚಿನ ಮಾಹಿತಿಗೆ ಪ್ರೊ.ನಾಗೇಶ್ ವಿ. ಬೆಟ್ಟಕೋಟೆ, ವಿಚಾರ ಸಂಕಿರಣ ಸಂಯೋಜಕರು, ಪ್ರದರ್ಶನ ಕಲಾ ವಿಭಾಗ ಜ್ಞಾನಭಾರತಿ, ಬೆಂಗಳೂರು 560056, ಫೋನ್: ಕಚೇರಿ: 080-22961708/1701 ಈ ಮೇಲ್ drvnb1965@gmail.com ಗೆ ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News