ಕೆಆರ್‌ಐಡಿಎಲ್‌ನಲ್ಲಿ ಅಕ್ರಮ: ಇಬ್ಬರು ಅಧಿಕಾರಿಗಳ ಬಂಧನ
Update: 2016-03-01 23:50 IST
ಬೆಂಗಳೂರು, ಮಾ.1: ಕರ್ತವ್ಯದಲ್ಲಿ ಅಕ್ರಮ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಕೆಆರ್‌ಐಡಿಎಲ್ ಲಿಂಗಸೂರು ವಿಭಾಗದ ಇಬ್ಬರು ಸಹಾಯಕ ಅಭಿಯಂತರರನ್ನು ರಾಯಚೂರು ಸದರ್ ಬಜಾರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಅಧಿಕಾರಿಗಳನ್ನು ನರಸಿಂಹರಾಜು, ಶಾಂತಮೂರ್ತಿ ಎಂದು ಗುರುತಿಸಲಾಗಿದೆ. ಇವರು ಕೆಆರ್‌ಐಡಿಎಲ್ ಅನುದಾನ ಬಳಕೆಯಲ್ಲಿ ವಿಳಂಬ ಹಾಗೂ ಈ ಹಣವನ್ನು ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ಇವರ ಬಂಧನಕ್ಕೆ ರಾಯಚೂರು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದರು. ಹೀಗಾಗಿ, ನಗರದ ಸದರ್ ಬಜಾರ್ ಠಾಣೆ ಪೊಲೀಸರು ನರಸಿಂಹರಾಜು, ಶಾಂತಮೂರ್ತಿಯನ್ನು ಬಂಧಿಸಿದ್ದಾರೆ.